Monday, May 6, 2024

ಮತ್ತೆ ಸೋತ RCB : ಡು ಪ್ಲೆಸಿಸ್-ಡಿಕೆ ಆಟ ವ್ಯರ್ಥ, RCBಗೆ 6ನೇ ಸೋಲು

ಬೆಂಗಳೂರು : ಮತ್ತೆ ಸೋತ RCB. ಗೆದ್ದು ಬೀಗಿದ SRH. ಆರ್​ಸಿಬಿಗೆ ಸತತ ಐದನೇ ಹಾಗೂ ಟೂರ್ನಿಯಲ್ಲಿ 6ನೇ ಸೋಲು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೀನಾಯ ಸೋಲು ಅನುಭವಿಸಿತು. ಹೈದರಾಬಾದ್​ 25 ರನ್​ಗಳ ಗೆಲುವು ದಾಖಲಿಸಿತು.

ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ 288 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಉತ್ತಮ ಆರಂಭ ಪಡೆಯಿತು. ವಿರಾಟ್ ಕೊಹ್ಲಿ 42 ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ 32 ರನ್​ ಗಳಿಸಿದರು. ಇವರಿಬ್ಬರು ಔಟಾದ ಬಳಿಕ ಆರ್​ಸಿಬಿ ಸಂಕಷ್ಟಕ್ಕೆ ಸಿಲುಕಿತು.

ವಿಲ್ ಜ್ಯಾಕ್ಸ್ 7, ರಜತ್ ಪಾಟಿದಾರ್ 9, ಸುಯಶ್ ಪ್ರಭುದೇಸಾಯಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಮಹಿಪಾಲ್ ಲೊಮ್ರೋರ್ 19 ರನ್​ಗೆ ಆಟ ಮುಗಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ದಿನೇಶ್​ ಕಾರ್ತಿಕ್ ಏಕಾಂಗಿ ಹೋರಾಟ ನಡೆಸಿದರು. ಹೈದರಾಬಾದ್​ ಬೌಲರ್​ಗಳ ಬೆವರಿಳಿಸಿದರು. 35 ಎಸೆತಗಳಲ್ಲಿ 7 ಸಿಕ್ಸರ್​ ಹಾಗೂ 5 ಬೌಂಡರಿಗಳೊಂದಿಗೆ 83 ರನ್​ ಚಚ್ಚಿದರು. ಆದರೆ, ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ.

ಅಂತಿಮವಾಗಿ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್​ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್​ ಪರ ನಾಯಕ ಪ್ಯಾಟ್ ಕಮಿನ್ಸ್ 3, ಮಯಾಂಕ್ ಮಾರ್ಕಂಡೆ 2, ಟಿ. ನಟರಾಜನ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES