Friday, May 10, 2024

ಗ್ಯಾರೆಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ : HDK ಹೇಳಿಕೆಗೆ ಗೃಹ ಸಚಿವ ಪರವೇಶ್ವರ್​ ಗರಂ

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರದ ವೇಳೆ ಮಾತನಾಡುವಾಗ ಕಾಂಗ್ರೆಸ್​ನ ಗ್ಯಾರೆಂಟಿ ಯೋಜನೆಗಳಿಂದ ನಾಡಿನ ಮಹಿಳೆಯರು, ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದರು ಈ ಹೇಳಿಕೆಗೆ ಗೃಹ ಸಚಿವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಸಚಿವ ಪರಮೇಶ್ವರ್ ಅವರು, ಇದು ದುರಾದೃಷ್ಟ, ಮುಖ್ಯಮಂತ್ರಿ ಆಗಿದ್ದವರು ಯೋಜನೆಯನ್ನು ವಿರೋಧ ಮಾಡಲಿ ಅದಕ್ಕೆ ನಮ್ಮದೇನು ತೊಂದರೆ ಇಲ್ಲ, ನಾವು ಯೋಜನೆಯನ್ನು ತಂದಿದ್ದೇವೆ ಸರಿ ಇಲ್ಲ ಎನ್ನುವ ಮಾತನ್ನು ಹೇಳಲಿ ಪರವಾಗಿಲ್ಲ, ಆದರೇ, ನಮ್ಮ ತಾಯಂದಿರು ಸಹೋದರಿಯರ ಬಗ್ಗೆ ಅವರು ದಾರಿ ತಪ್ಪಿದ್ದಾರೆ ಎಂದರೆ ಅರ್ಥವೇನು? ಸಾಮಾನ್ಯವಾಗಿ ಹಳ್ಳಿ ಭಾಷೆಯಲ್ಲಿ ದಾರಿ ತಪ್ಪಿದ್ದಾಳೆ ಎಂದರೆ ಕೆಟ್ಟು ಹೋಗಿದ್ದಾಳೆ ಎಂದು ಅರ್ಥ, ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಈ ಮಾತನ್ನು ಆಡಬಾಡದಿತ್ತು ಎಂದರು. ಈ ಕೂಡಲೆ ರಾಜ್ಯದ ಮಹಿಳೆಯರನ್ನು ಮತ್ತು ತಾಯಂದಿರನ್ನು ಕ್ಷಮೆ ಕೇಳಬೇಕು ಎಂದು  ಒತ್ತಾಯಿಸಿದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿತಪ್ಪಿದ್ದಾರೆ : ಕುಮಾರಸ್ವಾಮಿ

ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆ ಅನುಷ್ಟಾನವಾಗಿದೆ ಅನ್ನೋದು ಇವರಿಗೆ ಬೇಸರ ತಂದಿದೆ, ದುರದೃಷ್ಟ ಏನಂದ್ರೆ ನಾನಿರುವಾಗ ಮಾಡೋಕೆ ಆಗಲಿಲ್ಲ ಅನ್ನೋದು ಇರಬಹುದೇನೋ. ಇದು ಯಶಸ್ವಿ ಆಗಿದೆ ಅನ್ನೋದಕ್ಕೆ ಅವರ ಪ್ರತಿಕ್ರಿಯೆ ಈರೀತಿ ಇದೆ ಅನ್ನಿಸುತ್ತದೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES