Friday, May 10, 2024

ಡಿಕೆ ದರ್ಬಾರ್.. 22 ಎಸೆತಗಳಲ್ಲಿ 53 ರನ್ ಚಚ್ಚಿದ ದಿನೇಶ್ ಕಾರ್ತಿಕ್

ಬೆಂಗಳೂರು : ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೃಹತ್ ಮೊತ್ತ ಪೇರಿಸಿತು. RCB ಪರ ದಿನೇಶ್​ ಕಾರ್ತಿಕ್ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದರು.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್​ ಗಳಿಸಿತು.

ಇನ್ನಿಂಗ್ಸ್​ ಆರಂಭಿಸಿದ RCBಗೆ ಉತ್ತಮ ಆರಂಭ ಸಿಗಲಿಲ್ಲ. ವಿರಾಟ್ ಕೊಹ್ಲಿ 3 ಹಾಗೂ ವಿಲ್ ಜಾಕ್ಸ್​ 8 ರನ್​ ಗಳಿಸಿ ನಿರಾಸೆ ಮೂಡಿಸಿದರು. ನಾಯಯ ಡುಪ್ಲೆಸಿಸ್ ಹಾಗೂ ರಜತ್ ಪಾಟಿದಾರ್ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು.

ಡುಪ್ಲೆಸಿಸ್ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸ್​ ನೆರವಿನೊಂದಿಗೆ ಭರ್ಜರಿ ಅರ್ಧಶತಕ (61) ಸಿಡಿಸಿದರು. ರಜತ್ ಪಾಟೀದಾರ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಬೌಂಡರಿಗಳೊಂದಿಗೆ 50 ರನ್​ ಚಚ್ಚಿದರು. ಇಬ್ಬರ ಅರ್ಧಶತಕ ಆಟ ಆರ್​ಸಿಬಿಗೆ ಚೇತರಿಕೆ ನೀಡಿತು.

ಡಿಕೆ ಅಬ್ಬರದ ಅರ್ಧಶತಕ

ರಜತ್ ಔಟಾದ ಬಳಿಕ ಬಂದ ಮ್ಯಾಕ್ಸ್​ವೆಲ್ ಶೂನ್ಯಕ್ಕೆ ಔಟಾದರು. ಲೊಮ್ರೋರ್ ಸಹ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ದಿನೇಶ್ ಕಾರ್ತಿಕ್ ಮುಂಬೈ ಬೌಲಿಂಗ್ ದಾಳಿಯನ್ನು ​ಸಮರ್ಥವಾಗಿ ಎದುರಿಸಿದರು. 22 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸ್ ನೆರವಿನೊಂದಿಗೆ ಅಜೇಯ 53 ರನ್​ ಸಿಡಿಸಿದರು.

5 ವಿಕೆಟ್ ಕಬಳಿಸಿದ ಬುಮ್ರಾ

ಮುಂಬೈ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ತೋರಿದ ಬುಮ್ರಾ 5 ವಿಕೆಟ್ ಪಡೆದು ಮಿಂಚಿದರು. ಕೋಟ್ಜಿ, ಆಕಾಶ್ ಮದ್ವಾಲ್ ಹಾಗೂ ಶ್ರೇಯಸ್​ ಗೋಪಾಲ್ ತಲಾ ಒಂದು ವಿಕೆಟ್ ಪಡೆದರು. ಮುಂಬೈ ಗೆಲ್ಲಲು 197 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES