Sunday, May 5, 2024

ಪ್ರಧಾನಿ ಮೋದಿ ಭಾರತದ ಮುಖವಾಗಿದ್ದಾರೆ : ಅಮೆರಿಕ ಕಾಂಗ್ರೆಸ್ ಸದಸ್ಯ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮುಖವಾಗಿದ್ದಾರೆ ಎಂದು ಅಮೆರಿಕದ ಹಿರಿಯ ಕಾಂಗ್ರೆಸ್ಸಿಗರೊಬ್ಬರು ಹೇಳಿದ್ದಾರೆ. ಅಲ್ಲದೆ, 2014ರಿಂದ ದೇಶ ಕಂಡ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಭಾರತ ಮತ್ತು ಅಮೆರಿಕ ದೇಶಗಳ ದ್ವಿಪಕ್ಷೀಯ ಸಂಬಂಧ ಬಲಗೊಂಡಿದೆ ಎಂದು ಅಮೆರಿಕ ಕಾಂಗ್ರೆಸ್‌ನಲ್ಲಿ ಭಾರತದ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರೆಂದು ಪರಿಗಣಿಸಲಾದ ಬ್ರಾಡ್ ಶೆರ್ಮನ್ ಹೇಳಿದ್ದಾರೆ. ಆದರೆ, ಭಾರತ ಹಾಗೂ ಅಮೆರಿಕ ಬಾಂಧವ್ಯದಲ್ಲಿ ರಷ್ಯಾ ಜತೆಗಿನ ರಕ್ಷಣಾ ಸಂಬಂಧ ಸವಾಲಾಗಿದೆ ಎಂದಿದ್ದಾರೆ.

69 ವರ್ಷದ ಶೆರ್ಮನ್ ಅವರು ಸದನದ ವಿದೇಶಿ ವ್ವವಹಾರಗಳ ಸಮಿತಿಯಲ್ಲಿ ಡೆಮಾಕ್ರಟ್ ಪಕ್ಷ ಹಿರಿಯ ಸದಸ್ಯರಾಗಿದ್ದಾರೆ. ಕಳೆದ 28 ವರ್ಷಗಳಿಂದ ಭಾರತ ಹಾಗೂ ಅಮೆರಿಕ ಸಂಬಂಧಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಹಾಗೂ ಭಾರತದ ಸಂಬಂಧದಲ್ಲಿ ಅಗಾಧವಾದ ಬಲವರ್ಧನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಕಾಶ್ಮೀರದ ಬಗ್ಗೆ ಖರ್ಗೆ ಹೇಳಿಕೆ ನಾಚಿಕೆಗೇಡು : ಇದು ‘ತುಕ್ಡೆ ತುಕ್ಡೆ’ ಮನಸ್ಥಿತಿ ಎಂದ ಪ್ರಧಾನಿ ಮೋದಿ

ವಿಶೇಷವಾಗಿ ರಕ್ಷಣಾ ವಲಯದಲ್ಲಿ ಮಿಲಿಟರಿ ಗುಪ್ತಚರ ಮಾಹಿತಿ ಹಂಚಿಕೆಯೊಂದಿಗೆ ಅತಿದೊಡ್ಡ ಜಂಟಿ ಕಾರ್ಯಾಚರಣೆಗಳು ಮತ್ತು ತಾಲೀಮುಗಳನ್ನು ನೋಡಿದ್ದೇವೆ. ಇಂಡೋ ಹಾಗೂ ಪೆಸಿಫಿಕ್ ಅನ್ನು ಮುಕ್ತ ಮತ್ತು ಶಾಂತಿಯುತವಾಗಿಡಲು ಪ್ರಯತ್ನಿಸುವತ್ತ ಗಮನಹರಿಸಿದ್ದೇವೆ ಎಂದು ಬ್ರಾಡ್ ಶೆರ್ಮನ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES