Saturday, May 18, 2024

ಇಡೀ ರಾತ್ರಿ ಆಂತಕದಲ್ಲೇ ಕಾಲ ಕಳೆದ ರೇವಣ್ಣ

ಬೆಂಗಳೂರು: ಮಹಿಳೆ ಕಿಡ್ನ್ಯಾಪ್ ಕೇಸ್​​​​ನಲ್ಲಿ ಎಸ್ಐಟಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಡರಾತ್ರಿಯವರೆಗೂ ನಿದ್ದೆ ಮಾಡದೆ ಆತಂಕದಲ್ಲಿದ್ದಾರೆ. SIT ಅಧಿಕಾರಿಗಳು ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲು ದಾಖಲೆ ಸಿದ್ದತೆ ಮಾಡಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಹೆಚ್​.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರೋದು ಖಚಿತವಾಗಿದ್ದು ಸೋಮವಾರ ರೆಗ್ಯುಲರ್ ಬೇಲ್​​ಗೆ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಒಕ್ಕಲಿಗ ನಾಯಕತ್ವಕ್ಕಾಗಿಯೇ ನಡೀತಾ ವಿಡಿಯೋ ಪ್ರಕರಣ? : ಪ್ರಜ್ವಲ್ ಪ್ರಕರಣಕ್ಕೆ ಬಿಗ್ ಟಿಸ್ಟ್

ಹೆಚ್.ಡಿ.ರೇವಣ್ಣ ರಾತ್ರಿ ಇಡೀ SIT ಕಚೇರಿಯಲ್ಲೇ ಕಳೆದಿದ್ದಾರೆ. ಪ್ರಕರಣ ಸಂಬಂಧ SIT ಇಂದು ಮತ್ತಷ್ಟು ವಿಚಾರಣೆ ನಡೆಸಲಿದೆ. ಸದ್ಯ ಅಧಿಕಾರಿಗಳು ನೂರಾರು ಪ್ರಶ್ನೆ ಸಿದ್ಧಪಡಿಸಿದ್ದಾರೆ. ಸಂತ್ರಸ್ತೆ ಮಹಿಳೆಯ ಪರಿಚಯ, ಕಿಡ್ನ್ಯಾಪ್‌ ಕಿರುಕುಳ ಕೊಟ್ಟಿದ್ದರ ಬಗ್ಗೆ ಸತೀಶ್‌ ಬಾಬಣ್ಣ, ರಾಜಗೋಪಾಲ್‌ ರನ್ನು ವಿಚಾರಣೆ ನಡೆಸಲಿದ್ದಾರೆ. ಸಂತ್ರಸ್ತೆ ವಿಡಿಯೋ ಚಿತ್ರೀಕರಣ, ಲೈಂಗಿಕ ಕಿರುಕುಳ ಎಲ್ಲದರ ಬಗ್ಗೆಯೂ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ.

ರೇವಣ್ಣ ಬಂಧನದ ಬೆನ್ನಲ್ಲೇ ಭವಾನಿಗೂ ಸಂಕಷ್ಟ?

ಮಹಿಳ‍ೆಯೊಬ್ಬರ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬಂಧನದ ಬೆನ್ನಲ್ಲೇ ಅವರ ಪತ್ನಿ ಭವಾನಿ ರೇವಣ್ಣ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಅಪಹರಣ ಪ್ರಕರಣ ಸಂಬಂಧ ಮಹಿಳೆಯ ಪುತ್ರ ಕೆ.ಆರ್‌.ನಗರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ಭವಾನಿ ರೇವಣ್ಣ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭವಾನಿ ಅವರನ್ನು ಎಸ್‌ಐಟಿ ವಿಚಾರಣೆ ಮಾಡಲಿದೆ. ಹೀಗಾಗಿ ಒಂದೆರೆಡು ದಿನಗಳಲ್ಲಿ ಭವಾನಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES