Sunday, May 5, 2024

ಕಾಶ್ಮೀರದ ಬಗ್ಗೆ ಖರ್ಗೆ ಹೇಳಿಕೆ ನಾಚಿಕೆಗೇಡು : ಇದು ‘ತುಕ್ಡೆ ತುಕ್ಡೆ’ ಮನಸ್ಥಿತಿ ಎಂದ ಪ್ರಧಾನಿ ಮೋದಿ

ಬಿಹಾರ : ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ವಯ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸುವುದಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ಬಿಹಾರದ ನಾವ್ಡಾದಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೋಡಿ ನಾಚಿಕೆಯಾಗುತ್ತಿದೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ಮಾತನಾಡಬೇಕು. ಅಂತಹುದರಲ್ಲಿ ಖರ್ಗೆಯವರು ರಾಜಸ್ಥಾನಕ್ಕೆ ಬಂದು ಆರ್ಟಿಕಲ್ 370 ಬಗ್ಗೆ ಮಾತನಾಡಿದರೆ ಏನು ಪ್ರಯೋಜನ. ಅವರು ಜಮ್ಮು ಮತ್ತು ಕಾಶ್ಮೀರ ಭಾರತದ  ಅವಿಭಾಜ್ಯ ಅಂಗವೇ ಅಲ್ಲವೇನೋ ಎಂಬಂತೆ ಮಾತನಾಡುತ್ತಿರುವುದು ಕೇಳಿ ನಾಚಿಕೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ಪ್ರಮುಖರು ಗಮನವಿಟ್ಟು ಕೇಳಬೇಕು. ಬಿಹಾರದ ಹಲವಾರು ಮಂದಿ ವೀರಯೋಧರು ತಾಯ್ನಾಡಿಗಾಗಿ ತಮ್ಮ ತ್ಯಾಗ ಬಲಿದಾನ ಮಾಡಿದ್ದಾರೆ. ಜಮ್ಮು-ಕಾಶ್ಮೀರವನ್ನು ಉಳಿಸುವ ಸಲುವಾಗಿ ಎಷ್ಟೋ ಮಂದಿ ಯುವಕರ ಮೃತದೇಹಗಳನ್ನು ರಾಷ್ಟ್ರ ಧ್ವಜದಿಂದ ಮುಚ್ಚಿ ವಾಪಸ್ ಅವರ ತವರೂರಿಗೆ ತರಲಾಗಿದೆ. ರಾಜಾಸ್ತಾನದಿಂದಲೂ ಸಹ ಸಾಕಷ್ಟು ವೀರ ಯೋಧರು ಜಮ್ಮು ಕಾಶ್ಮೀರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಈಗ ಕಾಂಗ್ರೆಸ್ ಅಧ್ಯಕ್ಷರು ದೇಶದ ಒಂದು ಮೂಲೆಯಲ್ಲಿರುವ ಆ ಜಾಗದ ಅವಶ್ಯಕತೆ ಏನು ಎಂದು ಪ್ರಶ್ನಿಸುತ್ತಿದ್ದಾರಲ್ಲಾ? ಇದು ತುಕ್ಡೆ ತುಕ್ಡೆ ಗ್ಯಾಂಗ್​ನ ಪರಿಭಾಷೆಯಾಗಿದೆ. ಇಂತಹವರನ್ನು ನೀವು ಕ್ಷಮಿಸುತ್ತೀರಾ? ಎಂದು ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES