Saturday, May 18, 2024

ಬೌರಿಂಗ್ ಆಸ್ಪತ್ರೆಯಲ್ಲಿ ಹೆಚ್.ಡಿ. ರೇವಣ್ಣಗೆ ಮೆಡಿಕಲ್ ಟೆಸ್ಟ್

ಬೆಂಗಳೂರು : ಮಹಿಳೆಯ ಅಪಹರಣ ಪ್ರಕರಣದಲ್ಲಿ SIT ಅಧಿಕಾರಿಗಳು ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು ಬಂಧಿಸಿದ್ದು, ಇದೀಗ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​ ಮಾಡಲಾಗಿದೆ.

ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿಯೇ ರೇವಣ್ಣ ಬಂಧನವಾಗಿದ್ದು, SIT ಅಧಿಕಾರಿಗಳು ತಮ್ಮ ಕಚೇರಿಗೆ ಕರೆದೊಯ್ದಿದ್ದರು. ಬಳಿಕ ಆ್ಯಂಬುಲೆನ್ಸ್​ ಮೂಲಕ ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕ್ರಿಟಿಕಲ್‌ ಕೇರ್‌ ರೆಸ್ಪಾನ್ಸ್ ಯೂನಿಟ್‌ನಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ವೈದ್ಯರು ಹೆಚ್.ಡಿ. ರೇವಣ್ಣಗೆ ಬಿಪಿ, ಶುಗರ್‌ ಟೆಸ್ಟ್ ಮಾಡಿದ್ದಾರೆ. ಬೇರೆ ಏನಾದರೂ ಆರೋಗ್ಯ ಸಮಸ್ಯೆ ಇದ್ಯಾ ಎಂದು ವೈದ್ಯರು ಮಾಹಿತಿ ಪಡೆದಿದ್ದಾರೆ.

ಮೆಡಿಕಲ್ ಟೆಸ್ಟ್ ಬಳಿಕ ಜಡ್ಜ್ ಎದುರು ರೇವಣ್ಣರನ್ನ ಹಾಜರುಪಡಿಸುವ ಸಾಧ್ಯತೆಯಿದೆ. ನಾಳೆ ಭಾನುವಾರ ಹಿನ್ನಲೆ ಇಂದೇ ನ್ಯಾಯಾಧೀಶರ ಎದುರು ಎಸ್​ಐಟಿ ಹಾಜರುಪಡಿಸಲಿದೆ ಎನ್ನಲಾಗಿದೆ. ಮೆಡಿಕಲ್ ಟೆಸ್ಟ್ ಬಳಿಕ ರೇವಣ್ಣರನ್ನ ಕೋರಮಂಗಲದ NGVಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ.

ಪ್ರಜ್ವಲ್​ ಎಲ್ಲೇ ಇರಲಿ, ಬಂಧಿಸಲಾಗುತ್ತದೆ

ಹೆಚ್​.ಡಿ. ರೇವಣ್ಣ ಬಂಧನ ವಿಚಾರ ಕುರಿತ ಕಾನೂನು ಸಚಿವ ಹೆಚ್​.ಕೆ. ಪಾಟೀಲ್​ ಪ್ರತಿಕ್ರಿಯಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ರೇವಣ್ಣ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಕೆಲವು ಪುರಾವೆಗಳು ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಸಂಸದ ಪ್ರಜ್ವಲ್​ ರೇವಣ್ಣ ಎಲ್ಲೇ ಇರಲಿ, ಅವರನ್ನು ಬಂಧಿಸಲಾಗುತ್ತದೆ. ಸಹಜವಾಗಿ SIT ತನಿಖೆ ಚುರುಕುಗೊಳ್ಳಲಿದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES