Monday, June 17, 2024

ಪ್ರಜ್ವಲ್​ ರೇವಣ್ಣ ರಾಸಲೀಲೆ ಪ್ರಕರಣ: ಮಾಜಿ ಪ್ರಧಾನಿ ದೇವೇಗೌಡ ಫಸ್ಟ್​ ರಿಯಾಕ್ಷನ್​

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ರಾಸಲೀಲೆಗಳ ಒಪೆನ್​ ಕುರಿತು 22 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿದರು.

ತಮ್ಮ 92ನೇ ಜನ್ಮದಿನದ ಪ್ರಯುಕ್ತ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ನಗರದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ಪ್ರಜ್ವಲ್​ ರೇವಣ್ಣ ಪ್ರಕರಣದ ಬಗ್ಗೆ ಕುಮಾರಸ್ವಾಮಿಯವರು ಈಗಾಗಲೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಹಲವು ಜನರು ಶಾಮೀಲಾಗಿದ್ದಾರೆ. ಪ್ರಜ್ವಲ್ ರೇವಣ್ಣ ಸೇರಿದಂತೆ ಎಲ್ಲರ ವಿರುದ್ದವೂ ಕ್ರಮ ಜಗುರಿಸಬೇಕು ಎಂದರು.

ಇದನ್ನೂ ಓದಿ: ಕೋರ್ಟ್​ನಲ್ಲೂ ಪ್ರತಿಧ್ವನಿಸಿದ ‘ಪವರ್’ ವರದಿ : ಮೇ 20ಕ್ಕೆ ರೇವಣ್ಣ ಜಾಮೀನು ತೀರ್ಪು

ಈ ಪ್ರಕರಣದಲ್ಲಿ ಶಾಮೀಲಾಗಿರುವವರ ಹೆಸರನ್ನು ನಾನು ಹೇಳುವುದಿಲ್ಲ, ಹಲವು ಭಾಗಿಯಾಗಿದ್ದಾರೆ ಪ್ರಜ್ವಲ್​ ವಿರುದ್ದ ಕಾನೂನು ಪ್ರಕಾರ ಏನು ಕ್ರಮ ಆಗಬೇಕೋ ಅದು ಆಗುತ್ತದೆ. ದೇವರಾಜೇಗೌಡ ಏನು ಹೇಳಿದ್ದಾರೆಂದು ಮಾಧ್ಯಮದಲ್ಲಿ ನೋಡಿದ್ದೇವೆ. ಎಲ್ಲದಕ್ಕೂ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ಯಾವುದೇ ವಿಚಾರ ಬಂದರೂ ಹೋರಾಟ ಮಾಡುವ ಛಲ ಇದೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಕಡೆ ನಾನು ಪ್ರಚಾರ ಮಾಡಿದ್ದೇನೆ. ಚುನಾವಣಾ ಫಲಿತಾಂಶ ಬಳಿಕ ನಿಮ್ಮನ್ನು ಭೇಟಿ ಮಾಡುತ್ತೇನೆ. ಅಲ್ಲಿಯವರೆಗೆ ನಾನು ಯಾರನ್ನೂ ಭೇಟಿ ಮಾಡಲ್ಲ ಎಂದು ಅವರು ತಿಳಿಸಿದರು.

RELATED ARTICLES

Related Articles

TRENDING ARTICLES