Saturday, May 18, 2024

ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ : ಇಂದು ಸೋತರೆ RCB ಟೂರ್ನಿಯಿಂದ ಔಟ್!

ಬೆಂಗಳೂರು : ಗುಜರಾತ್ ಟೈಟಾನ್ಸ್ ವಿರುದ್ಧ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್​ನ 52 ಪಂದ್ಯ ನಡೆಯುತ್ತಿದೆ. ಸತತ ಸೋಲುಗಳ ಬಳಿಕ ಭರ್ಜರಿ ಕಂಬ್ಯಾಕ್ ಮಾಡಿರುವ ಆರ್​ಸಿಬಿ ತವರು ಅಂಗಳದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.

ಇಂದಿನ ಪಂದ್ಯ ಎರಡೂ ತಂಡಗಳಿಗೂ ‘ಮಾಡು ಇಲ್ಲವೆ ಮಡಿ’ಯಾಗಿದೆ. ವಿರಾಟ್ ಕೊಹ್ಲಿ ಜೊತೆ ವಿಲ್ ಜಾಕ್ಸ್​ ಕೂಡ ಅದ್ಭುತ ಫಾರ್ಮ್​ಗೆ ಮರಳಿದ್ದು ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಆದರೆ, ಆರ್​ಸಿಬಿ ಪಂದ್ಯ ಸೋತರ ನೇರ ಮನೆಗೆ ಸೇರಲಿದೆ. ಗೆದ್ದರೆ ಪ್ಲೇಆಫ್​ ಕನಸು ಜೀವಂತವಾಗಿರಲಿದೆ. ಬಳಿಕ, ಇತರ ತಂಡಗಳ ಪ್ರದರ್ಶನದ ಮೇಲೆ ಆರ್​ಸಿಬಿ ಭವಿಷ್ಯ ನಿರ್ಧಾರವಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿ.ಕೀ.), ಕರಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯ್ ಕುಮಾರ್ ವೈಶಾಕ್

ಆರ್​ಸಿಬಿ ಇಂಪ್ಯಾಕ್ಟ್ ಪ್ಲೇಯರ್ಸ್ : ಅನುಜ್ ರಾವತ್, ಮಹಿಪಾಲ್ ಲೊಮ್ರೋರ್, ಆಕಾಶ್ ದೀಪ್, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ

ಗುಜರಾತ್ ಟೈಟಾನ್ಸ್

ವೃದ್ಧಿಮಾನ್ ಸಹಾ (ವಿ.ಕೀ.), ಶುಭ್​ಮನ್ ಗಿಲ್(ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮಾನವ್ ಸುತಾರ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ಜೋಶುವಾ ಲಿಟಲ್

ಗುಜರಾತ್ ಇಂಪ್ಯಾಕ್ಟ್ ಪ್ಲೇಯರ್ಸ್ : ಸಂದೀಪ್ ವಾರಿಯರ್, ಶರತ್ ಬಿಆರ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್

RELATED ARTICLES

Related Articles

TRENDING ARTICLES