Saturday, May 18, 2024

ಟಿ-20ಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ

ಬೆಂಗಳೂರು : ಈ ಬಾರಿಯ ಐಪಿಎಲ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೊಂದು ಹೊಸ ದಾಖಲೆ ಮಾಡಿದ್ದಾರೆ.

ಗುಜರಾತ್ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 6 ರನ್​ ಗಳಿಸುವ ಮೂಲಕ ಟಿ-20ಯಲ್ಲಿ 12,500 ರನ್​ ಪೂರೈಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾದರು.

ವೆಸ್ಟ್​ ಇಂಡೀಸ್​ನ ದಿಗ್ಗಜ ಕ್ರಿಸ್ ಗೇಲ್ 14,562 ರನ್​ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಆಟಗಾರ ಶೊಯೆಬ್ ಮಲಿಕ್ 13,360 ರನ್​ ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್​ನ ಆಲ್​ರೌಂಡರ್ ಕಿರಾನ್ ಪೋಲಾರ್ಡ್ 12,900 ರನ್​ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಅದ್ಭುತ ಫೀಲ್ಡಿಂಗ್

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ವಿರಾಟ್ ಕೊಹ್ಲಿ ಅದ್ಭುತ ಫೀಲ್ಡಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ರಾಹುಲ್ ತೆವಾಟಿಯಾ ಶಾರ್ಟ್ ಲೆಗ್ ಸೈಡ್​ ಆಡುತ್ತಿದ್ದರೆ, ನಾನ್​ ಸ್ಟ್ರೈಕರ್​ ಆಗಿರುವ ಶಾರುಖ್ ಖಾನ್ ರನ್​ಗಾಗಿ ಮುಂದಾದರು.

ವಿರಾಟ್ ಕೊಹ್ಲಿ ತನ್ನತ್ತ ಬಂದ ಬಾಲ್​ ಅನ್ನು ಒಂದೇ ಕೈಯಿಂದ ಎತ್ತಿಕೊಂಡು ಮಿಂಚಿನ ವೇಗದಲ್ಲಿ ರನೌಟ್ ಮಾಡಿ, ವಿಕೆಟ್ ಪಡೆದರು. ಕೊಹ್ಲಿ ಮಿಂಚಿನ ಫೀಲ್ಡಿಂಗ್​ಗೆ ಸಹ ಆಟಗಾರರು ಬೆಚ್ಚಿಬಿದ್ದರು. ಈ ಪಂದ್ಯದಲ್ಲಿ ಗುಜರಾತ್ 147 ರನ್​ಗಳಿಗೆ ಆಲೌಟ್​ ಆಗಿದೆ. ಆರ್​ಸಿಬಿ ಗೆಲ್ಲಲು 148 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES