Wednesday, June 19, 2024

ಪ್ರಜ್ವಲ್ ರಾಸಲೀಲೆ : ಇದೆಲ್ಲಾ ಕುಮಾರಸ್ವಾಮಿ ನಾಟಕ : ಶಾಸಕ ಎಸ್.ಆರ್. ಶ್ರೀನಿವಾಸ್

ತುಮಕೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಕುರಿತು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲಾ ಕುಮಾರಸ್ವಾಮಿ ನಾಟಕ. ಅವರೇ ಪ್ರಜ್ವಲ್​ನ ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಕುಟುಕಿದ್ದಾರೆ.

ಮಾಜಿ ಸಚಿವ ಹೆಚ್​.ಡಿ. ರೇವಣ್ಣ, ಹೆಚ್​.ಡಿ. ಕುಮಾರಸ್ವಾಮಿ, ಹೆಚ್​.ಡಿ. ದೇವೇಗೌಡರೇ ಪ್ಲೈಟ್ ಬುಕ್ ಮಾಡಿ ಕಳುಹಿಸಿರೋದು‌. ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ ಅಂತ ಅವರಿಗೆ ಗೊತ್ತು. ಹೊರ ದೇಶಕ್ಕೆ ಕಳುಹಿಸಿದವರು ಯಾರು? ಕಾನೂನಿನಲ್ಲಿ ಏನು ಶಿಕ್ಷೆ ಆಗಬೇಕು ಅಂತ ಸಂವಿಧಾನದಲ್ಲಿ ಬರೆದಿದ್ದಾರೆ. ಆ ಶಿಕ್ಷೆ ಆಗಲಿ ಅಂತ ನಾನು ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

ಶಾಸಕ ಎಂ.ಟಿ. ಕೃಷ್ಣಪ್ಪಗೆ ನಾನು ಏನು ಅಂತ ಗೊತ್ತು. ನನಗೆ ಯಾವುದೇ ವ್ಯಕ್ತಿ, ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುವ ಪ್ರಮೇಯ ಉದ್ಭವವಾಗಿಲ್ಲ. ಎಂ‌.ಟಿ. ಕೃಷ್ಣಪ್ಪ ಯಾವ ಉದ್ದೇಶ ಇಟ್ಟುಕೊಂಡು ಆ ರೀತಿಯಾಗಿ ಮಾತಾಡಿದ್ದಾರೋ ಗೊತ್ತಿಲ್ಲ. ನನ್ನ ಸ್ವಭಾವ ಏನು ಅಂತ ಕೃಷ್ಣಪ್ಪನಿಗೆ ಗೊತ್ತು. ನಾನು ಯಾವ ವ್ಯಕ್ತಿಗೆ ಹೆದರಿಕೊಂಡು, ಮೆಚ್ಚಿಸೋಕೆ ಆಗಲಿ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಅವ್ರ ಹತ್ತಿರ ಹೇಳಿಸಿಕೊಳ್ಳುವಷ್ಟು ಸಣ್ಣ ವ್ಯಕ್ತಿ ನಾನಲ್ಲ

ಏನಾದರೂ ಇದ್ರೆ ಕೃಷ್ಣಪ್ಪ ನನ್ನ ಹತ್ರ ಬಂದು ಮಾತಾಡಲಿ. ಅದನ್ನ ಬಿಟ್ಟು ಬೇರೆಲ್ಲೋ ಬಾಯಿಗೆ ಬಂದಂಗೆ ಮಾತಾಡಿದ್ರೆ, ಅದರ ಪರಿಣಾಮವನ್ನ ಹೆದರಿಸಬೇಕಾಗುತ್ತೆ . ನಮ್ಮ ತಾಲ್ಲೂಕಿನಲ್ಲಿ ಇವತ್ತಿನಿಂದ ಹೋರಾಟ ಮಾಡಿಕೊಂಡು ಬಂದಿಲ್ಲ. ಎಷ್ಟೋ ಕೆರೆಗಳಿಗೆ ನೀರು ಹರಿಸಿದ್ದೇನೆ. ನಮ್ಮ ತಾಲ್ಲೂಕಿನ ಜನರ ಹಿತ ಕಾಯೋದು ಹೇಗೆ ಅಂತ ಗೊತ್ತಿದೆ. ಎಂ.ಟಿ. ಕೃಷ್ಣಪ್ಪ ಹತ್ತಿರ ಹೇಳಿಸಿಕೊಳ್ಳುವಷ್ಟು ಸಣ್ಣ ವ್ಯಕ್ತಿ ನಾನಲ್ಲ ಎಂದು ಶಾಸಕ ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES