Saturday, July 13, 2024

ದರ್ಶನ್ ಫಾರ್ಮ್ ಹೌಸ್​​ ಉಸ್ತುವಾರಿ ಶ್ರೀಧರ್​ ಸಾವು: ಪವರ್ ಟಿವಿಗೆ ಇನ್ಸ್​​ಪೆಕ್ಟರ್ ತಿಪ್ಪೇಸ್ವಾಮಿ ಬೆದರಿಕೆ

ಬೆಂಗಳೂರು: ನಟ ದರ್ಶನ್​​​ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ನಟ ದರ್ಶನ್​​​ಗೆ ಸೇರಿದ ಫಾರ್ಮ್ ಹೌಸ್ ಬಳಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಕಳೆದ ಏಪ್ರಿಲ್​ 17ರಂದು ಫಾರ್ಮ್ ಹೌಸ್ ಬಳಿ ಮೃತದೇಹ ಪತ್ತೆಯಾಗಿದೆ. ಇನ್ನು ಈ ಕೇಸ್​​ನಲ್ಲೂ ಮತ್ತೆ ನಟ ದರ್ಶನ್​​ ಸಿಕ್ಕಿಹಾಕಿಕೊಳ್ಳುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಏಪ್ರಿಲ್​​​ 16ರಂದು ದರ್ಶನ್ ಫಾರ್ಮ್ ಹೌಸ್​​ ಉಸ್ತುವಾರಿ ಶ್ರೀಧರ್​ ಸಾವನ್ನಪ್ಪಿದ್ರು. ಇದೀಗ ಶ್ರೀಧರ್​ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ದರ್ಶನ್ ಫಾರ್ಮ್ ಹೌಸ್​​ನಲ್ಲಿ ಶ್ರೀಧರ್​​​ ರೈಟರ್​​​ ಆಗಿ ಕೆಲಸ ಮಾಡ್ತಿದ್ದ. ಫಾರ್ಮ್​​ ಹೌಸ್ ಪಕ್ಕದಲ್ಲೇ ರೈಟರ್ ಶ್ರೀಧರ್ ರಕ್ತಕಾರಿ ಸತ್ತಿದ್ದಾನೆ. ಕಲ್ಲು ಬಂಡೆ ಮೇಲೆ ಅನಾಥ ಶವವಾಗಿ ರೈಟರ್ ಶ್ರೀಧರ್ ಪತ್ತೆಯಾಗಿದ್ದಾರೆ.

ಮೃತಪಟ್ಟ ಮಾರನೇ ದಿನ ಶ್ರೀಧರ್ ಸ್ನೇಹಿತನಿಂದ ಮಾಹಿತಿ ಸಿಕ್ಕಿದೆ. ಶ್ರೀಧರ್​ ಮೃತದೇಹ ಕಂಡು ಪೊಲೀಸರಿಗೆ ಸ್ನೇಹಿತ ಮಾಹಿತಿ ನೀಡಿದ್ದ. ಅಸಹಜ ಸಾವು ಪ್ರಕರಣ ಎಂದು ಪೊಲೀಸರು ಕೇಸ್​​ ದಾಖಲಿಸಿಕೊಂಡಿದ್ದಾರೆ. ಆನೇಕಲ್ ಪೊಲೀಸರ ವಿಚಾರಣಾ ವರದಿ ಕೆಲವು ಅನುಮಾನಗಳನ್ನ ಹುಟ್ಟಿಸಿದೆ.

ಈ ಕುರಿತು ಪವರ್​ ಟಿವಿ ಮುಖ್ಯಸ್ಥರಾದ ರಾಕೇಶ್​ ಶೆಟ್ಟಿಯವರು ಪ್ರಕರಣದ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ಇನ್ಸ್​ಪೆಕ್ಟರ್​ ತಿಪ್ಪೇಸ್ವಾಮಿ ಸೇರಿದಂತೆ ಇತರೆ ಪೊಲೀಸ್​ ಸಿಬ್ಬಂದಿಗಳಿಗೆ ಕರೆ ಮಾಡಿದ್ದಾಗ ಅಧಿಕಾರಿಗಳು ನೀಡಿದ್ದ ವಿಚಾರಣಾ ವರದಿ ಕೆಲವು ಅನುಮಾನಗಳನ್ನು ಹುಟ್ಟಿಸುತ್ತಿದೆ. ಜೊತೆಗೆ ಇನ್ಸ್​​ಪೆಕ್ಟರ್​ ತಿಪ್ಪೇಸ್ವಾಮಿಯವರ ಬಳಿ ಮಾಹಿತಿ ಕೇಳುವಾಗ ಪವರ್​ಟಿವಿಗೆ ಬೆದರಿಕೆಯಾಕಿರುವುದು ಯಾರನ್ನೋ ಪ್ರಕರಣದಿಂದ ಕಾಪಾಡುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಹಲವು ಅನುಮಾನಗಳಿಗೆ ಮೂಡುತ್ತಿದೆ.

ಇದನ್ನೂ ಓದಿ: ನಟ ದರ್ಶನ್​ ಮ್ಯಾನೇಜರ್​ ಶ್ರೀಧರ್‌ ಡೆತ್‌ ನೋಟ್ ಸುತ್ತ.. ಅನುಮಾನದ ಹುತ್ತ

ಪವರ್ ಟಿವಿಗೆ ಇನ್ಸ್​​ಪೆಕ್ಟರ್ ತಿಪ್ಪೇಸ್ವಾಮಿ ಬೆದರಿಕೆ:

ರೈಟರ್ ಶ್ರೀಧರ್​​​ ಕುರಿತು ಇನ್ಸ್​​ಪೆಕ್ಟರ್​ ತಿಪ್ಪೇಸ್ವಾಮಿ ಪವರ್ ಟಿವಿಗೆ ಕೆಲ ಮಾಹಿತಿ ನೀಡಿದ್ದಾರೆ. ಸ್ಥಳ ಮಹಜರು ವೇಳೆ ಶ್ರೀಧರ್​​ನ ಮೊಬೈಲ್ ಸಿಕ್ಕಿದೆ. ಸಾವಿಗೆ ಮುನ್ನ ಮೊಬೈಲ್​​ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ವಿಡಿಯೋ ರೆಕಾರ್ಡ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದರು.

ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳುತ್ತಿದ್ದಂತೆ ಇದ್ದಕ್ಕಿದ್ದಂತೆ ಇನ್ಸ್​​ಪೆಕ್ಟರ್ ತಿಪ್ಪೇಸ್ವಾಮಿ ಪವರ್ ಟಿವಿ ತಂಡಕ್ಕೆ ಧಮ್ಕಿ ಹಾಕಿದ್ದಾರೆ. ಇದೆಲ್ಲಾ ಬೇಡ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ​​ನಿಮ್ಮ ಮೇಲೆಯೇ ಕೇಸ್ ಹಾಕ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. ಇದು ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಶ್ರೀಧರ್​​ಗೆ ಮದುವೆಯಾಗಿರಲಿಲ್ಲ- ರೈಟರ್ ಭಾನುಪ್ರಿಯ:

ಫಾರ್ಮ್ ಹೌಸ್ ರೈಟರ್ ಶ್ರೀಧರ್ ಮದುವೆಯಾಗಿದ್ದಾನಾ ಎಂಬ ಬಗ್ಗೆ ಗೊಂದಲ ಮೂಡಿದ್ದು, ಪೊಲೀಸ್ ಠಾಣೆಯ ರೈಟರ್ ಬಾನುಪ್ರಿಯ ಈ ಬಗ್ಗೆ ಕೆಲ ಮಾಹಿತಿ ನೀಡಿದ್ದಾರೆ. ಶ್ರೀಧರ್​​ಗೆ ಮದುವೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ರು. ಆದರೆ ಭಾನುಪ್ರಿಯ ಶ್ರೀಧರ್​​ಗೆ ಮದುವೆಯಾಗಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ತನಿಖೆಯನ್ನೇ ಸರಿಯಾಗಿ ಮಾಡದೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಯಾರನ್ನೋ ಬಚಾವ್​ ಮಾಡುವ ಪ್ರಯತ್ನ ನಡೆದಿರೋದು ಸ್ಪಷ್ಟವಾಗಿ ಕಾಣುತ್ತಿದೆ.

ಶ್ರೀಧರ್ ಮೊಬೈಲ್ ಸಿಕ್ಕಿಲ್ಲ- SI ಪ್ರದೀಪ್:

ಇತ್ತ ಶ್ರೀಧರ್​​ ಸಾವಿನ ಕುರಿತು ಸಬ್ ಇನ್ಸ್​ಪೆಕ್ಟರ್​​ ಪ್ರದೀಪ್​​ ವಿಭಿನ್ನ ಹೇಳಿಕೆ ನೀಡಿದ್ದಾರೆ. ಶ್ರೀಧರ್ ಮೊಬೈಲ್ ಸಿಕ್ಕಿಲ್ಲ ಎಂಬ ಬಗ್ಗೆ ಸಬ್ ಇನ್ಸ್​​ಪೆಕ್ಟರ್​ ಪ್ರದೀಪ್​​ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಬಾಟಲ್​​​​ FSLಗೆ ಕಳಿಸಿದ್ದೇವೆ ಎಂದು SI ಪ್ರದೀಪ್ ಮಾಹಿತಿ ನೀಡಿದ್ದಾರೆ. ಇನ್ಸ್​ಪೆಕ್ಟರ್​​, ಸಬ್ ಇನ್ಸ್​​ಪೆಕ್ಟರ್​ ಮಾಹಿತಿಗಳಲ್ಲೇ ಗೊಂದಲ ಇರೋದು ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತೀವ್ರ ಅನುಮಾನ ಮೂಡಿಸಿದೆ. ನಟ ದರ್ಶನ್​​ ರಕ್ಷಣೆಗೆ ಆನೇಕಲ್​ ಪೊಲೀಸರು ಮುಂದಾಗಿದ್ದಾರಾ ಎಂಬ ಅನುಮಾನ ಮೂಡಿದೆ.

RELATED ARTICLES

Related Articles

TRENDING ARTICLES