Saturday, July 13, 2024

ಕಿಲ್ಲಿಂಗ್​ ಸ್ಟಾರ್​ ದರ್ಶನ್​ ಮನೆ ಉಡೀಸ್​?

ಬೆಂಗಳೂರು: ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ದಿನದಿಂದ ದಿನ್ನಕ್ಕೆ ಚುರುಕುಗೊಳ್ಳುತ್ತಿದ್ದೂ ನಟ ದರ್ಶನ್​ಗೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಲೆ ಇದೆ. ಈ ನಡುವೆ ದರ್ಶನ್​ ನಿವಾಸಕ್ಕೆ ಸಂಚಕಾರ ಒದಗಿಬಂದಿದೆ.

ಒತ್ತುವರಿಯಾಗಿರುವ ನಟ ದರ್ಶನ್​ ಮನೆ ತೆರವು ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಕ್ರಮವಹಿಸಿ ತೆರವು ಮಾಡುತ್ತೇವೆ. ನೀನು ಸ್ಟೇ ತಂದ್ರೂ ತೆರವಿಗೊಳಿಸುತ್ತೇನೆ,, ನಾನು ಸ್ಟೇ ತಂದಿದ್ರು ತೆರವು ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ನನ್ನ ಗುರು ದರ್ಶನ್​ ಕೊಲೆ ಪ್ರಕರಣದಲ್ಲಿ ಭಾಗಿಯಗಿದ್ದಾರೆಂದರೇ ನಂಬೋಕೆ ಆಗ್ತಿಲ್ಲ: ರಚಿತಾ ರಾಮ್​

ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಸಣ್ಣವರು, ದೊಡ್ಡವರು ಅಂತಾ ನೋಡಲ್ಲ ತೆರವು ಮಾಡುತ್ತೇವೆ. ಸ್ಟೇ ಇತ್ತು ನಾವು ವೆಕೆಟ್ ಮಾಡಿರಲಿಲ್ಲ. ಸ್ಟೇ ತೆರವು ಮಾಡಿ ಕಾರ್ಯಾಚರಣೆ ಮಾಡುತ್ತೇವೆ. ಎಷ್ಟು ಸ್ಟೇ ತೆರವು ಆಗುತ್ತೋ ನೋಡುತ್ತೇವೆ. ಎಲ್ಲೆಲ್ಲಿ ಸ್ಟೇ ಇರುವ ಪ್ರಕರಣಗಳು ಇವೆ ಅಲ್ಲೆಲ್ಲಾ ತೆರವು ಕಾರ್ಯ ಮಾಡುತ್ತೇವೆ. ಎಷ್ಟು ಬೇಗ ಕೋರ್ಟ್ ನಲ್ಲಿ ಸ್ಟೇ ತೆರವಾಗುತ್ತೆ ನೋಡುತ್ತೇವೆ, ನಂತರ ಕ್ರಮ ವಹಿಸುತ್ತೇವೆ ಎಂದರು.

RELATED ARTICLES

Related Articles

TRENDING ARTICLES