Saturday, May 18, 2024

ಬೆಂಗಳೂರಿನಲ್ಲಿ 2 ದಿನಗಳವರೆಗೆ ಮಳೆ ಸಾಧ್ಯತೆ

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮೇ 7 ರಂದು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಇಂದು ವಿದೇಶದಿಂದ ವಾಪಾಸ್​: 4 ಏರ್​ಪೋರ್ಟ್​ಗಳಲ್ಲಿ ಖಾಕಿ ಹೈ ಅಲರ್ಟ್​

ಮೇ 19ರ ನಂತರ ಸತತ ಮೂರು ವಾರಗಳ ಮಳೆ ಸಾಧ್ಯತೆ:

ಗ್ಲೋಬಲ್ ಫೋರ್‌ಕಾಸ್ಟ್ ಸಿಸ್ಟಮ್ (GFS) ಸಂಸ್ಥೆಯಿಂದ ವರದಿ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮೇ 19ರ ವರೆಗೆ ಆಗಾಗ ಮಳೆ ಹಾಗೂ 19ರ ನಂತರ ಸತತ ಮೂರು ವಾರಗಳ ಮಳೆ ಸಾಧ್ಯತೆಯಿದೆ ಎನ್ನಲಾಗಿದೆ.

ಬರದಿಂದ ಹೈರಾಣಾಗಿರುವ ರಾಜ್ಯಕ್ಕೆ ಮುಂದಿನ ಮೂರು ವಾರಗಳ ಕಾಲ ಸತತ ಮಳೆಯಾಗಲಿದೆ. ರಾಷ್ಟ್ರೀಯ ನೈಸರ್ಗಿಕ ಹವಾಮಾನ ಪ್ರೆಡಿಕ್ಷನ್ ಸಂಸ್ಥೆಯಾಗಿರುವ ಎಂದು ಟ್ವೀಟ್ ಮಾಡಿದ್ದು, ರಾಜ್ಯ ಹವಾಮಾನ ಇಲಾಖೆಯು ಎಕ್ಸ್​​ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ.

RELATED ARTICLES

Related Articles

TRENDING ARTICLES