Thursday, May 9, 2024

ಬಿಸಿಲ ತಾಪಕ್ಕೆ ಮತ್ತೊಬ್ಬ ವೃದ್ಧ ಕುಸಿದ ಬಿದ್ದು ಸಾವು!

ರಾಯಚೂರು : ಬಿಸಿಲಿನ ಶಾಖಕ್ಕೆ ಕಳೆದ ಒಂದು ತಿಂಗಳಿನಲ್ಲಿ ಸುಮಾರು ನಾಲ್ಕು ಮಂದಿ ಸಾವೀಗೀಡಾಗಿರುವ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವಯೋ ವೃದ್ದನೋರ್ವ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ನಗರದ ಗೋಶಾಲೆ ರಸ್ತೆಯಲ್ಲಿ ನಡೆದಿದೆ.

ಯಕ್ಲಾಸಪುರ ನಿವಾಸಿ ರಾಮಣ್ಣ (70) ಬಿಸಿಲಿನ ಝಳಕ್ಕೆ ಸಾವಿಗೀಡಾದ ವೃದ್ದ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಿಶ್ಯಕ್ತಿಗೆ ಇಳಗಾಗಿ ತಲೆ ಸುತ್ತು ಬಂದು ಏಕಾಏಕಿ ಕುಸಿದು ಬಿದ್ದ ವೃದ್ದ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಇದನ್ನೂ ಓದಿ: ಉಚಿತ ವಿದ್ಯುತ್‌ ನೀಡುವ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

ಒಂದೇ ತಿಂಗಳ ಅಂತರದಲ್ಲಿ ರಾಯಚೂರು ಜಿಲ್ಲೆಯಲ್ಲಿಯೇ ಬಿಸಿಲಿನಿಂದ ನಾಲ್ಕು ಜೀವಗಳು ಪ್ರಾಣಬಿಟ್ಟಿವೆ. ಮಾನ್ವಿ ಬಳಿ ಪಾದಯಾತ್ರೆ ಹೊರಟಿದ್ದ ಶ್ರೀಶೈಲ್ ಎಂಬ ಯುವಕ, ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಕೃಷ್ಣಪ್ಪ ಎಂಬ ವೃದ್ಧ, ಸಿಂಧನೂರುನಲ್ಲಿ ಬಿಸಿಲಿನ ತಾಪಕ್ಕೆ ವಾಂತಿ ಬೇದಿ ಆಗಿ ಬಾಣಂತಿ ಮಹಿಳೆ ಮೃತಪಟ್ಟಿದ್ದರು.
ಇದೀಗ ರಾಯಚೂರಿನ ರಾಮಣ್ಣ ಕಬ್ಬೇರ್‌ ಎಂಬುವವರು ಬಿಸಿಲಿನಿಂದ ಬಳಲಿ ಮೃತಪಟ್ಟಿದ್ಧಾರೆ.

ಜಿಲ್ಲಾಡಳಿತ ಮತ್ತು ನಗರಸಭೆಯಿಂದ ಸಗ್ನಲ್ ಗಳಲ್ಲಿ ನೆರಳು ಪರದೆ. ರಾಯಚೂರು ನಗರದ ಬಸವೇಶ್ವರ ವೃತ್ತ ಮತ್ತು ಗಂಜ್ ವೃತ್ತದಲ್ಲಿ ನೆರಳು ಪರದೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.

RELATED ARTICLES

Related Articles

TRENDING ARTICLES