Wednesday, May 8, 2024

ಪ್ರಚಾರದ ವೇಳೆ ಡಾ.ಕೆ ಸುಧಾಕರ್​ ಕಣ್ಣೀರು

ಚಿಕ್ಕಬಳ್ಳಾಪುರ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್​ ಅವರು ಪ್ರಚಾರದ ವೇಳೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ವೇಳೆ ಸುಧಾಕರ್​ ಕಣ್ಣೀರು ಹಾಕಿದ್ದಾರೆ. ಕಳೆದ 10 ವರ್ಷಗಳಲ್ಲಿ ಎಂದೂ ನಾನು ಜಾತಿ ರಾಜಕಾರಣ ಮಾಡಿಲ್ಲ, 2023 ರಲ್ಲಿ ಜಾತಿಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ದಯವಿಟ್ಟು ನನ್ನನ್ನು ಜಾತಿಯಿಂದ ನೋಡಲಿಕ್ಕೆ ಹೋಗಬೇಡಿ, ಕ್ಷೇತ್ರದ ಮತದಾರರೆಲ್ಲರನ್ನು ಸಮಾನವಾಗಿ ನೋಡಿಕೊಳ್ಳುತ್ತೇನೆ, ಕಳೆದ 10 ತಿಂಗಳಿಂದ ರಾಜಕೀಯ ಅಜ್ನಾತವಾಸ ಅನುಭವಿಸಿದ್ದೇನೆ, ನಾನೇನು ತಪ್ಪು ಮಾಡಿದ್ದೇನೆ, ನಾನೇನು ತಪ್ಪು ಮಾಡಿಲ್ಲ ನನಗೇಕೆ ಸೋಲಿನ ಶಿಕ್ಷೆ ಎಂದು ಜನರನ್ನುದ್ದೇಶಿಸಿ ಮಾತನಾಡುವಾಗ ಭಾವುಕರಾಗಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ, ಮಾಜಿ ಸಚಿವ ಭೈರತಿ ಬಸವರಾಜ್​ ಮತ್ತು ಸ್ಥಳೀಯ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸ್ವಂತ ಬೈಕ್​,ಕಾರು, ಮನೆಯಿಲ್ಲದ ತೇಜಸ್ವಿ ಸೂರ್ಯ : ಒಟ್ಟು 4.10 ಕೋಟಿ ಆಸ್ತಿ ಒಡೆಯ

ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಸುಧಾಕರ್​ ವಿರುದ್ದ ಸ್ವಕ್ಷೇತ್ರದಲ್ಲೆ ವಿರೋಧಿ ಅಲೆ ಎದ್ದಿತ್ತು, ಇದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್​ ಈಶ್ವರ್​ ವಿರುದ್ದ ಹೀನಾಯವಾಗಿ ಸೋತಿದ್ದರು. ಇದೀಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

RELATED ARTICLES

Related Articles

TRENDING ARTICLES