Sunday, May 19, 2024

ಪ್ರಜ್ವಲ್​ ರೇವಣ್ಣ ಪೌರ ಕಾರ್ಮಿಕ ಮಹಿಳೆಯರನ್ನೂ ಬಿಡ್ತಿರಲಿಲ್ಲ: ಕಾರ್ತಿಕ್​ ಗೌಡ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್​ ಮಾಜಿ ಕಾರು ಚಾಲಕ ಕಾರ್ತಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪವರ್​ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಜ್ವಲ್​ಗೆ ಹೆಣ್ಣು ಎಂದರೆ ಭೋಗದ ವಸ್ತು ಅಷ್ಟೇ. ಯಾವುದೇ ವಯಸ್ಸು ಕೂಡ ನೋಡಲ್ಲ, ಪೌರ ಕಾರ್ಮಿಕ ಮಹಿಳೆಯರನ್ನೂ ಆತ ಬಿಡ್ತಿರಲಿಲ್ಲ. ಪ್ರಜ್ವಲ್​ ಮನೆಯಲ್ಲಿದ್ರೆ, ಪೌರ ಕಾರ್ಮಿಕರು ಅವರ ಮನೆಗೆ ಹೋಗ್ತಾನೆ ಇರಲಿಲ್ಲ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬಗ್ಗೆಯೂ ಇದೇ ಥರಾ ಆರೋಪವಿತ್ತು.

ಇದನ್ನೂ ಓದಿ: ಸಂತ್ರಸ್ತೆ ಅಪಹರಣ ಆರೋಪ : ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಈ ಬಗ್ಗೆ ಜನರು ಸಾಕಷ್ಟು ಬಾರಿ ಮಾತಾಡಿಕೊಳ್ತಿದ್ದರು. ಪ್ರಜ್ವಲ್ ರೇವಣ್ಣ, ರೇವಣ್ಣರ ಮನೆಗಳಿಗೆ ಸಿಸಿಟಿವಿಗಳೇ ಇರಲ್ಲ. ಹೊಳೆನರಸೀಪುರ ಮನೆ, ಹಾಸನ ಸಂಸದನ ನಿವಾಸ, ಬೆಂಗಳೂರಿನ ಬಸವನಗುಡಿ ನಿವಾಸಕೂ ಸಹ ಸಿಸಿಟಿವಿಯೇ ಇಲ್ಲ ಎಂದು ಕಾರ್ತಿಕ್​ ಗಂಭೀರ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES