Sunday, May 19, 2024

35ನೇ ವಸಂತಕ್ಕೆ ಕಾಲಿಟ್ಟ ವಿನಯ್ ರಾಜ್.. ಕೇಕ್ ಕತ್ತರಿಸಿ ಸಂಭ್ರಮ

ಫಿಲ್ಮಿಡೆಸ್ಕ್​: 35ನೇ ವಸಂತಕ್ಕೆ ಕಾಲಿಟ್ಟಿರೋ ದೊಡ್ಮನೆಯ ವಿನಯ್ ರಾಜ್​ಕುಮಾರ್ ಮನೆಯಲ್ಲಿ ಸೆಲೆಬ್ರೇಷನ್ ಮನೆ ಮಾಡಿದೆ. ಒಂದು ಸರಳ ಪ್ರೇಮಕಥೆ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿರೋ ವಿನಯ್ ರಾಜ್, ಪೆಪೆ ಮುಖೇನ ತನ್ನ ನಟನಾ ಗಮ್ಮತ್ತಿನ ಗತ್ತು ತೋರಲು ಸಜ್ಜಾಗಿದ್ದಾರೆ. ಇಷ್ಟಕ್ಕೂ ಪೆಪೆ ಯಾವಾಗ ಬರಲಿದೆ..? ಬರ್ತ್ ಡೇ ಸಂಭ್ರಮಾಚರಣೆ ಹೇಗಿತ್ತು ಅಂತೀರಾ..? ಇಲ್ಲಿದೆ ಮಾಹಿತಿ.

ಸಿದ್ದಾರ್ಥ, ರನ್ ಆ್ಯಂಟೊನಿ, ಅನಂತು ವರ್ಸಸ್ ನುಸ್ರತ್.. ಹೀಗೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನ ಮಾಡಿದ ವಿನಯ್ ರಾಜ್​ಕುಮಾರ್, ಪ್ರಾಮಿಸಿಂಗ್ ಆ್ಯಕ್ಟರ್ ಆಗಿ ಕನ್ನಡಿಗರಿಗೆ ಚಿರಪರಿಚಿತರಾದರು. 10(ಟೆನ್) ಅನ್ನೋ ಸಿನಿಮಾ ಯಾವುದೇ ಪಬ್ಲಿಸಿಟಿ ಇಲ್ಲದೆ ಹೀಗೆ ಬಂದು ಹಾಗೆ ಹೋಯ್ತು. ಆದ್ರೆ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದಂತಹ ಒಂದು ಸರಳ ಪ್ರೇಮಕಥೆ ಚಿತ್ರ ಅಕ್ಷರಶಃ ವಿನಯ್ ರಾಜ್​ಕುಮಾರ್ ಕರಿಯರ್​ಗೆ ಹೊಸ ಮುನ್ನುಡಿ ಬರೆಯಿತು.

ವಿನಯ್ ರಾಜ್​​ರಲ್ಲಿದ್ದ ಅದ್ಭುತ ಕಲಾವಿದನನ್ನ ಈ ಚಿತ್ರ ಪರಿಚಯಿಸಿತು. ಯಾವುದೇ ಬಿಲ್ಡಪ್​​ಗಳಿಲ್ಲದೆ, ನವಿರಾದ ಪ್ರೇಮಕಥೆಯ ಏರಿಳಿತಗಳ ಮೂಲಕ ಬ್ರಿಲಿಯೆಂಟ್ ಪರ್ಫಾಮೆನ್ಸ್ ನೀಡಿದ್ರು ವಿನಯ್. ಇದೀಗ ಅವ್ರ ಕರಿಯರ್​ಗೆ ಮತ್ತೊಂದು ಮೆಗಾ ಟ್ವಿಸ್ಟ್ ನೀಡೋ ಸಮಯ ಸನಿಹವಾಗಿದೆ. ಅದೇ ಪೆಪೆ ಸಿನಿಮಾ. ಯೆಸ್.. ಟೀಸರ್​​ಗಳಿಂದ ಹಂಗಾಮ ಮಾಡ್ತಿರೋ ಪೆಪೆ, ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: ದೀಪಿಕಾ-ರಣ್​ವೀರ್ ದಾಂಪತ್ಯದಲ್ಲಿ ಬಿರುಕು: ಡಿವೋರ್ಸ್​ ಕಿಡಿ

ಇಲ್ಲಿಯವರೆಗೆ ತನ್ನ ಹೆಸರಿಗೆ ತಕ್ಕನಾಗಿ ವಿನಯವಾಗಿದ್ದ ವಿನಯ್​ರಾಜ್, ಪೆಪೆ ಚಿತ್ರದಲ್ಲಿ ಮಚ್ಚು ಹಿಡಿದು ಶತ್ರುಗಳನ್ನ ಕೊಚ್ಚುವ ಪರಿ ನೋಡಿದ್ರೆ ಓ ಮೈ ಗಾಡ್ ಇದು ವಿನಯ್ ರಾಜೇನಾ ಅಂತ ಹುಬ್ಬೇರಿಸ್ತೀರಾ. ಅಷ್ಟರ ಮಟ್ಟಿಗೆ ಮಾಸ್ ಅವತಾರದಲ್ಲಿ ಮೈ ಝುಮ್ಮೆನಿಸೋ ಪಾತ್ರದಲ್ಲಿ ನೋಡುಗರಿಗೆ ಕಿಕ್ ಕೊಡೋ ಧಾವಂತದಲ್ಲಿದ್ದಾರೆ ವಿನಯ್. ಶ್ರೀಲೇಶ್ ಎಸ್ ನಾಯರ್ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ.

ಇತ್ತೀಚೆಗೆ 35ನೇ ವಸಂತಕ್ಕೆ ಕಾಲಿಟ್ಟ ವಿನಯ್ ರಾಜ್​ಕುಮಾರ್ ಪೆಪೆ ಚಿತ್ರತಂಡ ಟೀಸರ್, ಟ್ರೈಲರ್, ಸಾಂಗ್ ಏನನ್ನೂ ಗಿಫ್ಟ್ ಆಗಿ ನೀಡಿಲ್ಲ. ಆದ್ರೆ ಈ ಬಾರಿ ಸಿನಿಮಾನೇ ರಿಲೀಸ್ ಮಾಡೋ ಮೂಲಕ ದೊಡ್ಡ ಗಿಫ್ಟ್ ನೀಡಲಿದೆ. ಬರ್ತ್ ಡೇ ವಿಶೇಷ ಪೆಪೆ ಚಿತ್ರದ ನಿರ್ಮಾಪಕರುಗಳಾದ ಶ್ರೀರಾಮ್ ಬಿ.ಎಂ. ಕೋಲಾರ ಹಾಗೂ ಉದಯ್ ಶಂಕರ್ ಎಸ್ ತಮ್ಮ ಚಿತ್ರತಂಡದ ಜೊತೆಗೂಡಿ ರಾಘವೇಂದ್ರ ರಾಜ್​ಕುಮಾರ್ ನಿವಾಸದಲ್ಲಿ ವಿನಯ್​​ರಾಜ್​ಗೆ ಕೇಕ್ ಕಟ್ ಮಾಡಿಸಿ, ವಿಶೇಷ ಸನ್ಮಾನ ಮಾಡಿದ್ರು. ಅದಕ್ಕೆ ಯುವರಾಜ್​ಕುಮಾರ್ ಕೂಡ ಸಾಥ್ ನೀಡಿದ್ದು ವಿಶೇಷ.

ಕೆಪಿ ಶ್ರೀಕಾಂತ್ ನಿರ್ಮಾಣದ ಗ್ರಾಮಾಯಣ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಪೆಪೆ ರಿಲೀಸ್ ಡೇಟ್ ಅನೌನ್ಸ್ ಆಗ್ತಿದ್ದಂತೆ ಪ್ರಮೋಷನಲ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ನಟ ವಿನಯ್ ರಾಜ್. ಅಂದೊಂದಿತ್ತು ಕಾಲ ಅನ್ನೋ ಮತ್ತೊಂದು ಸಿನಿಮಾ ಕೂಡ ರಿಲೀಸ್​ಗೆ ಸಜ್ಜಾಗಿದ್ದು, ಒಂದರ ಹಿಂದೊಂದು ತೆರೆಗಪ್ಪಳಿಸಲಿವೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES