Sunday, May 19, 2024

ದೀಪಿಕಾ-ರಣ್​ವೀರ್ ದಾಂಪತ್ಯದಲ್ಲಿ ಬಿರುಕು: ಡಿವೋರ್ಸ್​ ಕಿಡಿ

ಫಿಲ್ಮಿಡೆಸ್ಕ್​: ತಾವು ಸದ್ಯದಲ್ಲೇ ಅಪ್ಪ-ಅಮ್ಮ ಆಗ್ತಿದ್ದೀವಿ ಅಂತ ಹೇಳಿ ಗುಡ್​ ನ್ಯೂಸ್ ಕೊಟ್ಟಿದ್ದ ರಣ್​ವೀರ್ ಆ್ಯಂಡ್ ದೀಪಿಕಾ ಈಗ ಎಲ್ಲರಿಗೂ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ರಣ್​ವೀರ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಿಂದ ಮದುವೆ ಫೊಟೋ, ವಿಡಿಯೋಗಳನ್ನ ಡಿಲೀಟ್​​ ಮಾಡಿದ್ದು, ಅರೇ ಇವರಿಗೇನಾಯ್ತು ಅಂತ ಫ್ಯಾನ್ಸ್​ ತಲೆಕೆಡಿಸಿಕೊಂಡಿದ್ದಾರೆ. ಮಗು ಬರ್ತಿರೋ ಹೊತ್ತಲ್ಲಿ ಅಪ್ಪ-ಅಮ್ಮನೇ ಬೇರೇ ಆದ್ರಾ..?  ರಣ್​ವೀರ್-ದೀಪಿಕಾ ನಡುವೆ ಏನ್ ನಡೀತಿದೆ.. ಈ ಕುರಿತ ರೋಚಕ ಸ್ಟೋರಿ ಇಲ್ಲಿದೆ.

ಯೆಸ್, ಸಿನಿಲೋಕದಲ್ಲಿ ಹರಿದಾಡ್ತಿರೋ ಈ ಬ್ರೇಕಿಂಗ್ ನ್ಯೂಸ್ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದೆ.  ಇಂಡಿಯನ್ ಸಿನಿ ಇಂಡಸ್ಟ್ರಿಯ ಕ್ಯೂಟ್ ಕಪಲ್, ಸ್ಟಾರ್ ಜೋಡಿ ರಣ್​ವೀರ್ – ದೀಪಿಕಾ ಬಗ್ಗೆ ಹರಿದಾಡ್ತಾ ಇರುವ ಈ ವದಂತಿ ಕೇಳಿ ಅರೇ ಏನಾಯ್ತು ಇವರಿಗೆ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಅಸಲಿಗೆ ಈ ವದಂತಿ ಹುಟ್ಟೋದಕ್ಕೆ ಕಾರಣವಾಗಿರೋದು ರಣ್​ವೀರ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಿಂದ ಮದುವೆಯ ಫೋಟೋ, ವಿಡಿಯೋಗಳನ್ನೆಲ್ಲಾ ಒಂದು ಉಳಿಸದಂತೆ ಡಿಲೀಟ್ ಮಾಡಿದ್ದಾರೆ.

ಕಳೆದ ಫೆಬ್ರುವರಿಯಲ್ಲಷ್ಟೇ ರಣ್​ವೀರ್ ಆ್ಯಂಡ್ ದೀಪಿಕಾ ತಾವು ಪೇರೆಂಟ್ಸ್ ಆಗ್ತಾ ಇದ್ದೀವಿ ಅನ್ನೋ ಖುಷಿಯ ಸಂಗತಿ ಹಂಚಿಕೊಂಡಿದ್ರು. ಬರಲಿರುವ ಸಪ್ಟೆಂಬರ್ ತಿಂಗಳಲ್ಲಿ ತಮ್ಮ ಮನೆಗೆ ಹೊಸ ಜೀವ ಬರಲಿದ ಅನ್ನೋ ವಿಚಾರವನ್ನ ಹಂಚಿಕೊಂಡು ಎಲ್ಲರಿಗೂ ಸಿಹಿಸುದ್ದಿ ಕೊಟ್ಟಿದ್ರು.

ಇದನ್ನೂ ಓದಿ: ಒಂದು ವರ್ಷದಿಂದ ಗಡ್ಡ, ಕೂದಲು ಬಿಟ್ಟಿದ್ದೇನೆ : ‘ಕಾಂತಾರ-1’ ಬಗ್ಗೆ ಅಪ್ಡೇಟ್ ಕೊಟ್ಟ ರಿಷಭ್ ಶೆಟ್ಟಿ

ಆದ್ರೆ ಈಗ ನೋಡಿದ್ರೆ ಎರಡೇ ತಿಂಗಳಲ್ಲಿ ಬೇರೆಯದ್ದೇ ವದಂತಿ ಹರಿದಾಡ್ತಾ ಇದೆ. ಅತ್ತ ಪತ್ನಿ ಗರ್ಭಿಣಿಯಾಗಿರಯವ ಹೊತ್ತಲ್ಲಿ ಪತಿ ಮದುವೆಯ ಫೋಟೋಗಳನ್ನ ಡೀಲೀಟ್​​ ಮಾಡಿ ತಮ್ಮ ಪ್ರೀತಿಯ ಕುರುಹನ್ನೇ ಅಳಿಸಿ ಹಾಕ್ತಾ ಇದ್ದಾನೆ. ಇದು ಹೇಗೆ ತಾನೇ ಸಾಧ್ಯ ಅಂತ ಫ್ಯಾನ್ಸ್ ನಡುವೆ ಗಹನವಾದ ಚರ್ಚೆಯಾಗ್ತಾ ಇದೆ.

ಅಸಲಿಗೆ ರಣ್​ವೀರ್ ದೀಪಿಕಾ ನಡುವೆ ಏನ್ ನಡೀತಾ ಇದೆ ಅಂತ ಹುಡುಕಹೋದ್ರೆ ಅಚ್ಚರಿಯ ಕಥೆಯೇ ತೆರೆದುಕೊಳ್ಳುತ್ತೆ. ಕೆಲ ದಿನಗಳ ಹಿಂದೆ ಕಾಫಿ ವಿತ್ ಕರಣ್ ಶೋನಲ್ಲಿ ರಣ್​ವೀರ್ ದೀಪಿಕಾ ಭಾಗಿಯಾಗಿದ್ದಾಗ, ಸಂಬಂಧದ ವಿಚಾರದಲ್ಲಿ ಇಬ್ಬರ ನಡುವೆ ಕೆಲ ಕಹಿ ವಿಚಾರ ಇದೆ ಅನ್ನೋದು ಬಯಲಾಗಿತ್ತು.

ಮಗು ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ:

ಇನ್ನೂ ಮಗು ವಿಚಾರದಲ್ಲಿ ಕೂಡ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನಲಾಗ್ತಾ ಇದೆ. ದೀಪಿಕಾ ತನ್ನ ಸೌಂದರ್ಯ ಹಾಳಾಗಬಾರದು ಅನ್ನೋ ಕಾರಣಕ್ಕೆ ಬಾಡಿಗೆ ತಾಯ್ತನದ ಮೊರೆ ಹೋಗ್ತಿದ್ದಾರಂತೆ. ಆದ್ರೆ ಇದು ರಣ್​ವೀರ್​ಗೆ ಇಷ್ಟವಿಲ್ಲ ಎನ್ನಲಾಗ್ತಾ ಇದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆಯಂತೆ.

ಅಸಲಿಗೆ ಬೆಂಗಳೂರು ಬೆಡಗಿ ದೀಪಿಕಾ , ಮುಂಬೈ  ಕುವರ ರಣ್​ವೀರ್​ದು​ ಆನ್​ ಸ್ಕ್ರೀನ್ ಆ್ಯಂಡ್ ಆಫ್ ಸ್ಕ್ರೀನ್ ಹೇಳಿ ಮಾಡಿಸಿದ ಜೋಡಿ. 2013ರಲ್ಲಿ ರಾಮ್​ಲೀಲಾ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ ತಮ್ಮ ಲವ್ಲಿ ಕೆಮೆಸ್ಟ್ರಿಯಿಂದ ನೋಡುಗರಿಗೆ ಮೋಡಿ ಮಾಡಿದ್ರು.

ಬಾಜಿರಾವ್ ಮಸ್ತಾನಿ,  ಪದ್ಮಾವತ್, ಸೇರಿದಂತೆ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿರೋ ರಣ್​ವೀರ್ ದೀಪಿಕಾ, ರಿಯಲ್ ಲೈಫ್​ನಲ್ಲೂ ಜೋಡಿಯಾಗಿದ್ದು 2018ರಲ್ಲಿ. ಇಟಲಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದ ರಣ್​ವೀರ್​ ಮತ್ತು ದೀಪಿಕಾ ಬಾಲಿವುಡ್​ನ ಕ್ಯೂಟ್ ತಾರಾಜೋಡಿ ಎನ್ನಿಸಿಕೊಂಡಿದ್ರು.

ಇದೀಗ ಮಗುವಿನ ಆಗಮನದ ನಿರೀಕ್ಷೆಯಲ್ಲಿರೋ ಈ ದಂಪತಿ ಬಗ್ಗೆ ಡಿವೋರ್ಸ್ ರೂಮರ್ಸ್ ಹುಟ್ಟಿಕೊಂಡಿದೆ. ರಣ್​ವೀರ್ ಮದುವೆ ಫೋಟೋ ಡಿಲೀಟ್ ಮಾಡಿದ್ದನ್ನೇ ಇಟ್ಟುಕೊಂಡು ನಾನಾ ವದಂತಿ ಹರಿದಾಡ್ತಾ ಇವೆ. ಖುದ್ದು ದೀಪಿಕಾ ಆ್ಯಂಡ್ ರಣ್​ವೀರ್​ ಜೋಡಿಯೇ ಈ ಕುರಿತ ನಿಜ ಏನು ಅನ್ನೋದನ್ನ ಹೇಳಬೇಕಿದೆ.

ಅಮೀತ್, ಫಿಲಂ  ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES