Sunday, May 19, 2024

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜೈಲುಪಾಲು, 7 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್​ಐಟಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಜೈಲುಪಾಲಾಗಿದ್ದಾರೆ.

ಕೆ.ಆರ್‌. ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. 7 ದಿನಗಳ ಕಾಲ ಶಾಸಕ ರೇವಣ್ಣ ಪರಪ್ಪನ ಅಗ್ರಹಾರ ಸೇರಲಿದ್ದಾರೆ.

ಶಾಸಕ ಹೆಚ್​.ಡಿ. ರೇವಣ್ಣ ಅವರನ್ನು ಎಸ್​ಐಟಿ ಅಧಿಕಾರಿಗಳು 17 ACMM ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಿದರು. ಈ ವೇಳೆ ರೇವಣ್ಣ ಪರ ವಕೀಲ ಮೂರ್ತಿ ಡಿ ನಾಯ್ಕ್ ಹಾಗೂ ಎಸ್​ಐಟಿ ಪರ ಎಸ್​ಪಿಪಿ ಜಗದೀಶ್ ವಾದ ಮಂಡಿಸಿದರು.

ಎಸ್‌ಐಟಿ ಕಸ್ಟಡಿಯ ವೇಳೆ ರೇವಣ್ಣ ಉತ್ತರ ನೀಡಿಲ್ಲ. ತನಿಖೆಗೆ ಸಹಕಾರವನ್ನು ನೀಡಿಲ್ಲ. ಪ್ರಕರಣದ ಪ್ರಮುಖ ಆರೋಪಿ ಸಿಕ್ಕಿಲ್ಲ. ದೂರುದಾರರ ದೂರಿನಲ್ಲಿ ಪ್ರಾಣ ಬೆದರಿಕೆ ಆರೋಪವಿದೆ. ನ್ಯಾಯಾಲಯದಲ್ಲಿ ಸಾಕ್ಷಿ ಇಲ್ಲ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಹೀಗಾಗಿ, ಜಾಮೀನು ನೀಡಬಾರದು ಎಂದು ಎಸ್‌ಐಟಿ ಪರ ವಾದ ಜಗದೀಶ್‌ ವಾದ ಮಂಡಿಸಿದರು.

ಈ ವೇಳೆ ಮಾಜಿ ಸಚಿವ ಹೆಚ್​.ಡಿ. ರೇವಣ್ಣ, ಮೂರು ದಿನದಿಂದ ವಿಚಾರಣೆ ನಡೆಸುತ್ತಿದ್ದಾರೆ. ಅನಾರೋಗ್ಯ ಇದ್ದರೂ ವಿಚಾರಣೆಗೆ ಸಹಕರಿಸಿದ್ದೇನೆ. ಮೂರು ರಾತ್ರಿ ನಿದ್ರೆ ಮಾಡಲು ಬಿಟ್ಟಿಲ್ಲ. ನನಗೆ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ರೇವಣ್ಣ ಮನವಿಗೆ ಸ್ಪಂದಿಸದ ನ್ಯಾಯಾಲಯ ಮೇ 14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿತು.

RELATED ARTICLES

Related Articles

TRENDING ARTICLES