Sunday, May 19, 2024

ನಾನೇನೂ ತಪ್ಪು ಮಾಡಿಲ್ಲ ಸರ್, ಇದರಲ್ಲಿ ನನ್ನ ಪಾತ್ರ ಇಲ್ಲ : ಜಡ್ಜ್ ಮುಂದೆ ರೇವಣ್ಣ ಕಣ್ಣೀರು

ಬೆಂಗಳೂರು : 7 ದಿನ ನ್ಯಾಯಾಂಗ ಬಂಧನದ ಆದೇಶ ಪ್ರಕಟವಾಗುತ್ತಿದ್ದಂತೆ ನ್ಯಾಯಾಧೀಶರ ಮುಂದೆ ಶಾಸಕ ಹೆಚ್.ಡಿ. ರೇವಣ್ಣ ಕಣ್ಣೀರು ಹಾಕಿದ್ದಾರೆ.

ನಾನೇನೂ ತಪ್ಪು ಮಾಡಿಲ್ಲ ಸರ್ ಎಂದು ಕೋರ್ಟ್ ಕಾರಿಡಾರ್​​​ನಲ್ಲೇ ರೇವಣ್ಣ ಕುಸಿದು ಬಿದ್ದಿದ್ದಾರೆ. ಈ ವೇಳೆ ಹೆಚ್​.ಡಿ. ರೇವಣ್ಣರಿಗೆ ವಕೀಲರು ಸಾಂತ್ವನ ಹೇಳಿದ್ದಾರೆ.

ಏಪ್ರಿಲ್ 28 ರಂದು ನನ್ನ ಮೇಲೆ ಕೇಸ್ ಆಗಿದ್ರು. ಅದು ಬೇಲೆಬಲ್ ಆಗಿದ್ದಿರಿಂದ ಮತ್ತೊಂದು ಕೇಸ್ ಹಾಕಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ನನಗೆ ಆರೋಗ್ಯ ಸರಿಯಿಲ್ಲ. ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಸರ್ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.

3 ದಿನದಿಂದ ನನ್ನ ಆರೋಗ್ಯ ಸರಿಯಿಲ್ಲ

ಮೊನ್ನೆಯಿಂದ ಆಸ್ಪತ್ರೆಗೆ ಹೋಗೋಕೆ ಬಿಟ್ಟಿಲ್ಲ ಸರ್. ಮೂರು ದಿನದಿಂದ ನನ್ನ ಆರೋಗ್ಯ ಸರಿಯಿಲ್ಲ. ನಾನೇನೂ ತಪ್ಪು ಮಾಡಿಲ್ಲ ಸರ್. ನನಗೆ ಯಾವ ವಿಚಾರದ ಬಗ್ಗೆಯೂ ತಪ್ಪಿಲ್ಲ. ಬೇಕು ಅಂತಾನೇ ರಾಜಕೀಯಕ್ಕಾಗಿ ಮಾಡ್ತಾ ಇದ್ದಾರೆ ಸರ್. ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸ್​ಗಳಿಲ್ಲ. ನಿನ್ನೆಯಿಂದ ಹೊಟ್ಟೆನೋವು ಇದೆ. ಗ್ಲೂಕೋಸ್ ತಗೊಂಡು ಇದ್ದೀನಿ ಎಂದು ಅಳಲು ತೋಡಿಕೊಂಡಿದ್ದಾರೆ.

ಮೊದಲ ದಿನವೇ ಸುದ್ದಿಗೋಷ್ಠಿ ಮಾಡ್ತಿದ್ದೆ

ಆರೋಪಿ ಪ್ರೆಸ್ ಮುಂದೆ ಹೋಗ್ತಿದ್ದಾರೆ ಎಂದ ಪಿಪಿ ಪ್ರಶ್ನೆ ಮಾಡಿದ್ದಕ್ಕೆ ರೇವಣ್ಣ ಉತ್ತರಿಸಿದ್ದಾರೆ. ನಾನು ಯಾವುದೇ ಪ್ರೆಸ್ ಮೀಟ್ ಮಾಡಿಲ್ಲ ಸರ್, ಮಾಡೋದು ಇಲ್ಲ. ಮಾಡೋದಾಗಿದ್ರೆ ಮೊದಲ ದಿನವೇ ಸುದ್ದಿಗೋಷ್ಠಿ ಮಾಡ್ತಿದ್ದೆ. ನಾನು ಇವತ್ತಿನವರೆಗೆ ಯಾವುದೇ ಸುದ್ದಿಗೋಷ್ಠಿ ಮಾಡಿಲ್ಲ ಸರ್ ಎಂದು ರೇವಣ್ಣ ಹೇಳಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಇತ್ತ ಎಸ್​ಐಟಿ ಪರ ವಕೀಲರು, ಆರೋಪಿ ಪ್ರಭಾವಿ ಆಗಿರೋದ್ರಿಂದ ಸಾಕ್ಷ್ಯ ನಾಶ ಮಾಡಬಹುದು. ಜಾಮೀನು ಕೊಟ್ರೆ ಸಾಕ್ಷ್ಯ ನಾಶಪಡಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ. ಜಾಮೀನು ನೀಡಬಾರದು ಎಂದು ಎಸ್​ಐಟಿ ರಿಮಾಂಡ್​ನಲ್ಲಿ ಉಲ್ಲೇಖಿಸಿದೆ. ಹೀಗಾಗಿ, ನ್ಯಾಯಾಧೀಶರು, ರೇವಣ್ಣರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES