Thursday, May 2, 2024

ಸೌಮ್ಯಾ ರೆಡ್ಡಿ ಬಳಿ ಇರುವ ಆಸ್ತಿಯ ಮೌಲ್ಯವೆಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಇಂದು ನಾಮಪತ್ರವನ್ನು ಸಲ್ಲಿಸಿದ್ದರು. ಈ ವೇಳೆಯಲ್ಲಿ ಅವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು 2.13 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜಯನಗರದ ಮಾಜಿ ಶಾಸಕಿಯೂ ಆಗಿರುವ ಸೌಮ್ಯಾ ರೆಡ್ಡಿ ಅವರು 89.27 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಇನ್ನು 1.24 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಬಳಿ 44,135 ರೂ. ನಗದು ಇದೆ. ಬ್ಯಾಂಕ್‌ ಖಾತೆಯಲ್ಲಿ 40,96,252 ರೂ. ಇದೆ. 19,85,358 ರೂಪಾಯಿ ಬೆಲೆ ಬಾಳುವ ಒಂದು ಇನೋವಾ ಕಾರು ಕೂಡ ಇದೆ.

950 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಸೇರಿ ಒಟ್ಟು 28 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ಬೇಗೂರು ಬಳಿ 1.24 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ ಇದೆ ಎಂಬುದಾಗಿ ಅವರು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.

RELATED ARTICLES

Related Articles

TRENDING ARTICLES