Friday, May 10, 2024

ಫಾಲ್ಗುಣ ಮಾಸದ ಸಂಕಷ್ಟ ಚತುರ್ಥಿಯ ವಿಶೇಷತೆಗಳೇನು? ಪೂಜೆಗೆ ನೈವೇದ್ಯ ಏನು ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

ಫಾಲ್ಗುಣ ಮಾಸದಲ್ಲಿ ಸಂಕಷ್ಟ ಹರ ಮಹಾಗಣಪತಿಯನ್ನು ಬಾಲಚಂದ್ರ ಮಹಾಗಣಪತಿ ಎಂದು ಪೂಜಿಸಲಾಗುತ್ತದೆ.ಈ ದಿನದ ವಿಶೇಷತೆಗಳೇನು? ಪೂಜಾ ಸಮಯ ಯಾವುದು? ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಮಾಹಿತಿ ತಿಳಿಸಿದ್ದಾರೆ.

 ಸಂಕಷ್ಟ ಹರ ಚತುರ್ಥಿಯ ಕಾಲನಿರ್ಣಯ

ಪ್ರಾರಂಭ: 28-03-2024 ಸಂಜೆ 06:56ಕ್ಕೆ

ಮುಕ್ತಾಯ: 29-03-2024 ಸಂಜೆ 08:20ಕ್ಕೆ

ಚಂದ್ರೋದಯ: 28-03-2024 ರಾತ್ರಿ 9:10ಕ್ಕೆ

ಆರಾಧನೆಯಿಂದ ದೊರಕುವ ಫಲಾನುಫಲಗಲೇನು? 

  • ಸಿರಿ ಸಂಪತ್ತುಗಳನ್ನು ಅಷ್ಟೆಶ್ಚರ್ಯಗಳನ್ನು ಪಡೆಯಬಹುದು
  • ಸತ್ಸಂತಾನ ಫಲಗಳನ್ನು ಪಡೆಯಬಹುದು.
  • 3. ಉತ್ತಮ ಸೊಸೆ ಪ್ರಾಪ್ತಿ
  • ನಿಂತು ಹೋದ ಕೆಲಸಗಳು ಪುನಃ ಪ್ರಾರಂಭವಾಗುತ್ತದೆ.
  • ರೈತರಿಗೆ ಸಮದ್ಧಿಯಾದ ಬೆಳೆ ಪ್ರಾಪ್ತಿ
  • ಸಾಲಬಾಧೆಯಿಂದ ಮುಕ್ತಿ( ಋಣಮುಕ್ತಿ)
  • ವಿಶೇಷ ಜ್ಞಾನ ಪ್ರಾಪ್ತಿ

ಈ ದಿನ ಬಾಲಚಂದ್ರ ಮಹಾಗಣಪತಿಗೆ ಏನು ನೈವೇದ್ಯ ಮಾಡಬೇಕು

ಪಾಯಸ, ಆಂಬೋಡೆ, ಮಿಠಾಯಿ, ಮೋದಕ, ಚಕ್ಕುಲಿ,ಎಳ್ಳಿನಿಂದ ಮಾಡಿದ ಪದಾರ್ಥಗಳು,ಕೋಸಂಬರಿ ಇತ್ಯಾದಿ.

ಪೂಜೆಯನ್ನು ಮಾಡುವಾಗ ಹಳದಿ ವಸ್ತ್ರವನ್ನು ಧರಿಸುವುದು ಸೂಕ್ತ.

“ಓಂ ಬಾಲಚಂದ್ರಾಯ ನಮಃ” ಎಂದು ಸಾಧ್ಯವಾದಷ್ಟು ಬಾರಿ ಜಪಿಸಿ, ಚಂದ್ರ ದರ್ಶನ ನಂತರ ಅರ್ಘ್ಯವನ್ನು ಕೊಡಿ.

ಸನಾತದ ಧರ್ಮದ ಉಳಿವಿಗಾಗಿ ಸರ್ವರಿಗೂ ಶಿಕ್ಷಣದ ಅಗತ್ಯತೆ ಇದೆ. ಶ್ರೀಗಳವರ ಮಾರ್ಗದರ್ಶನದಂತೆ ನುರಿತ ಅಧ್ಯಾಪಕರುಗಳಿಂದ ಲೌಕಿಕ ಶಿಕ್ಷಣವನ್ನು ಹಾಗೂ ವಿದ್ವಾಂಸರುಗಳಿಂದ ಶಾಸ್ತ್ರಾಧ್ಯಯನವನ್ನು ಕಲಿಸಿಕೊಡಲಾಗುತ್ತಿದೆ. ಗುರುಕುಲ ಪದ್ಧತಿಯಂತೆ ಶಿಕ್ಷಣವನ್ನು ಕಲಿಯಲು ಇಚ್ಛೆಯುಳ್ಳವರು, ಆಸಕ್ತ ಪೋಷಕರು ತಮ್ಮ ಮಕ್ಕಳೊಂದಿಗೆ ಶ್ರೀಮಠವನ್ನು ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸಿ : 6364167671

ಶ್ರೀಮಠದ ವತಿಯಿಂದ ಅವಿರತವಾಗಿ ನಡೆಯುತ್ತಿರುವ ವಿದ್ಯಾದಾನ, ಗೋಸಂರಕ್ಷಣೆ, ಅನೇಕ ಧಾರ್ಮಿಕ ಕಾರ್ಯಗಳಿಗೆ ಭಕ್ತಾದಿಗಳು ಉದಾರವಾಗಿ ಧನ ಸಹಾಯ ಮಾಡಬಯಸುವರರು ಈ ಕೆಳಗಿನ ಶ್ರೀಮಠದ ಖಾತೆಗೆ ಸಂದಾಯಮಾಡಬಹುದು.

RELATED ARTICLES

Related Articles

TRENDING ARTICLES