Friday, May 10, 2024

ಲೋಕಸಭೆ ಟಿಕೆಟ್ ಆಫರ್ ಮಾಡಿದರೂ ನಾನೇ ಬೇಡ ಅಂದೆ: ಸಿ.ಟಿ. ರವಿ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್ ಆಫರ್ ಮಾಡಿದರೂ ನಾನೇ ಬೇಡ ಅಂತ ನಿರಾಕರಿಸಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಿಕ್ಕಬಳ್ಳಾಪುರದಲ್ಲಿ ನಿಮ್ಮ ಹೆಸರು ಕೂಡ ಕೇಳಿ ಬಂದಿದ್ದು ನಿಜವೇ ಎಂದು ಕೇಳಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನ ಚಿಕ್ಕಬಳ್ಳಾಪುರದಲ್ಲಿ ನಿಲ್ಲಿ ಅಂತ ಕೇಳಿದ್ದರು. ನಾನು ನಿಲ್ಲಲ್ಲ ಅಂತ ಹೇಳಿದ್ದೆನು. ಹಾಗಾಗಿ ಆ ಪ್ರಶ್ನೆಯೇ ಬರಲ್ಲ. ಸ್ಥಳೀಯರನ್ನ ಆರಿಸಿ ಅಂತ ಹೇಳಿದ್ದೆ. ಸುಧಾಕರ್ ಹಾಗೂ ಅಲೋಕ್ ವಿಶ್ವನಾಥ್ ಸೇರಿದಂತೆ ಅನೇಕರು ಇದ್ದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿರುವುದನ್ನು ತಿಳಿಸಿದರು.

ಕಾಂಗ್ರೆಸ್‌ನವರು ಸೋಲುವ ಹತಾಶಯಲ್ಲಿ ಇದ್ದಾರೆ

ಕಾಂಗ್ರೆಸ್‌ನವರು ಏನು ಮಾಡ್ತಿದ್ದೇವೆ ಅನ್ನೋ ಅರಿವೂ ಇಲ್ಲದೆ ಮಾತಾಡ್ತಿದ್ದಾರೆ. ಸೋಲಿನ ಹತಾಶೆಯಲ್ಲಿ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಬಿಜೆಪಿಯವರ ಮನೆ ಹಾಳಾಗ ಅಂತ ಹೇಳಿದ್ದಾರೆ. ಯಾರು ಮನೆ ಹಾಳು ಮಾಡುವ ಮನಸ್ಥಿತಿ ಇದೆ, ದೇಶವೂ ಹಾಳು ಮಾಡುವ ಮನಸ್ಥಿತಿಯವರೇ ಆಗಿರ್ತಾರೆ. ಸಿದ್ದರಾಮಯ್ಯ ಅವರ ಹೇಳಿಕೆ ದೇಶ ಹಾಳು ಮಾಡುವಂತದ್ದಾ.? ಮನೆ ಹಾಳು ಮಾಡುವ ಮನಸ್ಥಿತಿ ಇಂದ ಇವರು ಹೊರಗೆ ಬರಲಿ. ಮನೆ ಹಾಳು ಮಾಡುವವರು, ದೇಶ ಹಾಳು ಮಾಡುವವರ ಮನಸ್ಥಿತಿ ಒಂದೇ. ಇಂತವರು ಮನೆ ಹಾಳರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಪಮಾನ

ಮೋದಿ ಮೋದಿ ಅನ್ನೋರಿಗೆ ಕಪ್ಪಾಳಮೋಕ್ಷ ಮಾಡಿ ಅನ್ನೋ ಶಿವರಾಜ್ ತಂಗಡಗಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಂಸ್ಕೃತಿ ಏನು ಅನ್ನೋದೇ ಗೊತ್ತಿಲ್ಲ, ಆದರೂ ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆ ಕೊಟ್ಟಿದ್ದಾರೆ. ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರವಾಗಿದೆ. ಶಿವರಾಜ್ ತಂಗಡಗಿಗೆ ಬಾರಪ್ಪ ನಿಮ್ಮಪ್ಪನಿಗೆ ಹುಟ್ಟಿದ್ರೆ ಹೊಡೀ ಅಂತ ಹೇಳೋಣ ಅಂತ ಇದ್ದೆ. ಆದ್ರೆ, ನಾನು ಅಷ್ಟು ಕೆಳಗೆ ಇಳಿದು ಮಾತನಾಡಲ್ಲ. ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಪಮಾನ. ಯೋಗ್ಯತೆ ಇದ್ದವರು ಇಂತವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಇಟ್ಟು ಕೊಳ್ಳಲ್ಲ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES