Thursday, May 9, 2024

ಬಿಜೆಪಿಯವರ ಮನೆ ಹಾಳಾಗ.. ಸುಳ್ಳೇ ಅವ್ರ ಮನೆ ದೇವ್ರು : ಸಿದ್ದರಾಮಯ್ಯ ಟೀಕೆ

ಬೆಂಗಳೂರು : ಬಿಜೆಪಿಯವರ ಮನೆ ಹಾಳಾಗ.. ಸುಳ್ಳೇ ಅವರ ಮನೆ ದೇವರು. ಸ್ವಾತಂತ್ರ ಹೋರಾಟದಲ್ಲಿ ಏನಾದರೂ ಭಾಗಿಯಾಗಿದ್ದಾರಾ? ಎಂದು ಬಿಜೆಪಿಗರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವತಂತ್ರ ಪೂರ್ವದಲ್ಲಿ ಆರ್​ಎಸ್​ಎಸ್ ಶುರುವಾಗಿದೆ. ಆದ್ರೆ, ಒಬ್ಬರು ಹೋರಾಟದಲ್ಲಿ ಭಾಗಿಯಾಗಲಿಲ್ಲ. ನಾವು ಭಾರತ ಮಾತೆ ಮಕ್ಕಳು, ಭಾರತ ಮಾತೆ ಮಕ್ಕಳು ಅಂತ ಹಾಡ್ತಾರೆ. ನಾವು ಭಾರತ ಮಾತೆಯ ಮಕ್ಕಳಲ್ವಾ..? ನಾವು ಸ್ವಾತಂತ್ರ ಹೋರಾಟ ಮಾಡಲಿಲ್ವಾ..? ಎಂದು ಬಿಜೆಪಿ ಮತ್ತು ಆರ್​ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಹೆಂಡತಿನೂ ಬಸ್​ನಲ್ಲಿ ಹೋಗಬಹುದು

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನನ್ನ ಹೆಂಡತಿನೂ ಹೋಗಬಹುದು. ಇಂಡಿಯಾದಲ್ಲೇ ಫಸ್ಟ್ ಟೈಮ್ ನಾವು ಮಾಡಿದ್ದೇವೆ. ಯಾವುದೇ ಜಾತಿ, ಮತ, ಧರ್ಮದವರು ಹೋಗಬಹುದು. 3.5 ಕೋಟಿ ಹೆಣ್ಣುಮಕ್ಕಳು‌ ತಿರುಗಾಡಬಹುದು. ಬಿಜೆಪಿಯವರು ನಸುಗುನ್ನಿ‌ಕಾಯಿಗಳಿದ್ದಂತೆ. ‘ಸುಳ್ಳೇ ಅವರ ಮನೆ ದೇವರು’ ಎಂದು ಕಿಡಿಕಾರಿದರು.

ಮೋದಿ ಮೋದಿ ಅಂತ ಕೂಗುವವರು ಯಾರು?

ರೈತರ ಸಾಲ ಮನ್ನಾ ಮಾಡ್ತೇವೆ ಅಂದ್ರು ಮಾಡಿದ್ರಾ? ರೈತರಿಗೆ ಟೋಪಿ ಹಾಕಲಿಲ್ವಾ? ನೀವು ಇದೆಲ್ಲವನ್ನ ಜನರಿಗೆ ಮುಟ್ಟಿಸಬೇಕು. ಮೋದಿ ಮೋದಿ ಅಂತ ಕೂಗುವವರು ಯಾರು? ಬಿಜೆಪಿಯವರೇ ಕೂಗಿಸ್ತಾರೆ. ದಾರಿ ತಪ್ಪಿದವರನ್ನ ಸರಿದಾರಿಗೆ ತರಬೇಕು. ಅವ್ರು ಸಂವಿಧಾನದ ಮೇಲೆ ನಂಬಿಕೆ ಇಟ್ಟವರಲ್ಲ. ಸಂವಿಧಾನ ಸಮಾನ ಅವಕಾಶ ಕೊಟ್ಟಿದೆ. ಅವರು ಸಮಾನತೆಯನ್ನ ಒಪ್ಪುವವರಲ್ಲ ಎಂದು ಕುಟುಕಿದರು.

ಬಡ ಬ್ರಾಹ್ಮಣ ಬಂದ್ರೆ ನಮಸ್ಕಾರ ಹಾಕ್ತೇವೆ

ಬಡವರು, ಅವಿದ್ಯಾವಂತರಾದ್ರೆ ತಾನೇ ಶೋಷಿಸೋಕೆ ಸಾಧ್ಯ. ನಿಮ್ಮನ್ನ ದಾರಿ ತಪ್ಪಿಸೋಕೆ‌ ಸಾಧ್ಯ. ಬಡ ಬ್ರಾಹ್ಮಣ ಬಂದ್ರೆ ನಮಸ್ಕಾರ ಹಾಕ್ತೇವೆ. ದಲಿತ ವಿದ್ಯಾವಂತನಾದ್ರೂ ಏನ್ಲಾ.. ಅಂತ ಕರೆಯುತ್ತೇವೆ. ಇದು ಗುಲಾಮಗಿರಿಯ ಸಂಕೇತ. ಇದರಿಂದ ಹೊರಗೆ ಬರಬೇಕಲ್ವಾ? ದಲಿತರನ್ನ ಸಿಂಗಿಲರ್ ಮಾತನಾಡಿಸ್ತಾರೆ. ಬಡ ಬ್ರಾಹ್ಮಣನಿಗೆ ಗೌರವದಿಂದ ಮಾತನಾಡಿಸ್ತೇವೆ. ಇದನ್ನ ಕಿತ್ತು ಹಾಕೋಕೆ ಸ್ವಾಭಿಮಾನ ಬರಬೇಕಲ್ವಾ? ಅದು ಬರಬೇಕಾದ್ರೆ ಗ್ಯಾರಂಟಿಗಳು ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES