Friday, May 10, 2024

181 ಲೀಟರ್​ ಸರಾಯಿ, 8 ಲೀಟರ್​ ಬಿಯರ್ ಜಪ್ತಿ!

ಬೀದರ್ : ಲೋಕಸಭಾ ಚುನಾವಣೆ ಹಿನ್ನೆಲೆ ಫುಲ್​ ಅಲರ್ಟ್ ಆಗಿರುವ ಬೀದರ್ ಅಬಕಾರಿ ಪೊಲೀಸರು, ಇಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಅಪಾರ ಪ್ರಮಾಣದ ಮದ್ಯವನ್ನ ಜಪ್ತಿ ಮಾಡಿದ್ದಾರೆ.

ಬೀದರ್ ತಾಲೂಕಿನ ಕಮಠಾಣಾ ಹಾಗೂ ಖಾಶೇಂಪೂರ್ (ಸಿ) ಗ್ರಾಮದಲ್ಲಿ ಮದ್ಯ ಮಾರಾಟದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮನೆಯಲ್ಲಿ ಶೇಖರಿಸಿಟ್ಟಿದ್ದ ವಿವಿಧ ಬ್ರಾಂಡ್‌ಗಳ ಮದ್ಯದ ಬಾಟಲಿಗಳನ್ನ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬ್ರಹ್ಮ ಬಂದು ಬೇಡ ಅಂದ್ರು ಚುನಾವಣೆಗೆ ನಿಲ್ತೀನಿ : ಕೆ.ಎಸ್. ಈಶ್ವರಪ್ಪ

ಇನ್ನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಬರಲಿದ್ದು ಹಬ್ಬಕ್ಕೆ ಇಲ್ಲಿನ ಮದ್ಯದಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಅರಿತ ಅಕ್ರಮ ಮದ್ಯ ಮಾರಾಟಗಾರರು, ಅಪಾರ ಪ್ರಮಾಣದ ಮದ್ಯವನ್ನ ಹಬ್ಬಕ್ಕೂ ಮುನ್ನವೇ ಖರೀದಿಸಿ ಮನೆಯಲ್ಲಿ ಶೇಖರಿಸಿಟ್ಟಿದ್ದರು.

ಈ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ದಾಳಿ ನಡೆಸಿದ ಅಬಕಾರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತರಿಂದ 1.50 ಲಕ್ಷ ಮೌಲ್ಯದ 181 ಲೀಟರ್​ ಸರಾಯಿ, 8 ಲೀಟರ್​ ಬಿಯರ್ ​ಮತ್ತು ಒಂದು ಹೀರೋ ಹೋಂಡ ಬೈಕ್​ ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES