Wednesday, May 8, 2024

ಅಭ್ಯಾಸದ ವೇಳೆ ಧೋನಿ ಹೆಲಿಕಾಪ್ಟರ್ ಶಾಟ್ : ಇಲ್ಲಿದೆ ನೋಡಿ ವಿಡಿಯೋ

ಬೆಂಗಳೂರು : ಎಲ್ಲೆಡೆ ಐಪಿಎಲ್ ಜ್ವರ ಶುರುವಾಗಿದೆ. ಇತ್ತ ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ರಾಂತಿ ಪಡೆಯದೇ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಕೇವಲ ಇನ್ನೆರಡು ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಐಪಿಎಲ್ ಹಂಗಾಮ ಆರಂಭವಾಗಿದೆ. ಇದಕ್ಕಾಗಿ ಧೋನಿ ಚೆನ್ನೈನಲ್ಲಿ ಭರ್ಜರಿ ತಾಲೀಮು ನಡೆಸಿದ್ದಾರೆ. ಇತ್ತೀಚೆಗಷ್ಟೇ ಅಭ್ಯಾಸದ ವೇಳೆ MSD ಹೆಲಿಕಾಪ್ಟರ್ ಶಾಟ್ ಬಾರಿಸಿದ್ದಾರೆ.

ಅಭ್ಯಾಸದ ವೇಳೆ ಚೆನ್ನೈ ಬೌಲರ್​ ಎಸೆದ ಎಸೆತವನ್ನು ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಹಳ ದಿನಗಳ ನಂತರ ಧೋನಿಯ ಹೆಲಿಕಾಪ್ಟರ್ ಶಾಟ್ ನೋಡಿದ್ದೇವೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಮಾರ್ಚ್ 22ರಂದು ಚೆನ್ನೈನ ಚೆಪಕ್​ ಕ್ರೀಡಾಂಗಣದಲ್ಲಿ ಐಪಿಎಲ್-17ನೇ ಸೀಸನ್​ನ ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ.

ಚೆನ್ನೈ ಸೂಪರ್ ಕಿಂಗ್ಸ್​​ ತಂಡ

ಎಂ.ಎಸ್. ಧೋನಿ (ನಾಯಕ/ವಿ.ಕೀ.), ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ದೀಪಕ್ ಚಾಹರ್, ಡೆವೊನ್ ಕಾನ್ವೆ, ಶಿವಂ ದುಬೆ, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಮಥೀಶ ಪತಿರಾನಾ, ತುಷಾರ್ ದೇಶಪಾಂಡೆ, ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ಮಹೇಶ್ ತೀಕ್ಷಣ, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಶಾರ್ದೂಲ್ ಠಾಕೂರ್, ರಾಜವರ್ಧನ್ ಹಂಗರ್ಗೇಕರ್, ಅಜಯ್ ಮಂಡಲ್, ಮುಖೇಶ್ ಚೌಧರಿ, ಶೇಕ್ ಸಿಂಘೆಲ್ ರಷೀದ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಅವನೀಶ್ ರಾವ್, ಅವನೀಶ್ ರಾವ್ ಅರವೆಲ್ಲಿ.

RELATED ARTICLES

Related Articles

TRENDING ARTICLES