Monday, May 20, 2024

ಪ್ರಜ್ವಲ್​ಗಾಗಿ ನಾವು ಹುಡುಕುತ್ತಿದ್ದೇವೆ, ಪ್ರಜ್ವಲ್ ಬರೋವರೆಗೂ ವಿಚಾರಣೆ ನಡೆಸೋದು ಕಷ್ಟ : ಜಿ. ಪರಮೇಶ್ವರ್

ಬೆಂಗಳೂರು : ಸಂಸದ ಪ್ರಜ್ವಲ್‌ ರೇವಣ್ಣಗಾಗಿ ನಾವು ಹುಡುಕುತ್ತಿದ್ದೇವೆ. ಪ್ರಜ್ವಲ್‌ ಬರೋವರೆಗೂ ವಿಚಾರಣೆ ನಡೆಸೋದು ಕಷ್ಟ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಯುವಾಗ ಹೆಚ್ಚಿನ ಮಾಹಿತಿ ಹೇಳೋಕಾಗಲ್ಲ. ಬಂಧಿತರಿಂದ, ಸಂತ್ರಸ್ತೆಯರಿಂದ ಮಾಹಿತಿ ಪಡೆದಿದ್ದೇವೆ. ಎಸ್‌ಐಟಿ ತಂಡ ಸರಿಯಾಗಿ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈಗಾಗಲೇ SIT ಅಧಿಕಾರಿಗಳು ಗಂಭೀರ ತನಿಖೆ ಮಾಡ್ತಿದ್ದಾರೆ. ತಮಗೆ ಗೊತ್ತಿರುವಂತೆ ಪ್ರಜ್ವಲ್ ರೇವಣ್ಣ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಅವರು ವಿದೇಶದಲ್ಲಿ ಇದ್ದು, ವಾಪಸ್ ಕರೆತರಲು SIT CBI ಗೆಮನವಿ ಮಾಡಿದೆ. ಬ್ಲೂ ಕಾರ್ನರ್ ನೋಟಿಸ್ ನೀಡಿದ್ದಾರೆ. ಬ್ಲೂ ಕಾರ್ನರ್ ನೋಟಿಸ್ ಅಂದ್ರೆ 34 ದೇಶದಲ್ಲಿ ಇದ್ದರೂ ಮಾಹಿತಿ ನೀಡೋದು. ಆ ವ್ಯಕ್ತಿಯನ್ನ ಹುಡುಕಿ, ಸಂಬಂಧಪಟ್ಟವರಿಗೆ ಮಾಹಿತಿ ನೀಡ್ತಾರೆ. ಆ ಮೂಲಕ ಅವರನ್ನ ಕರೆತರೋದು ಎಂದು ಹೇಳಿದ್ದಾರೆ.

ಈಗಾಗಲೇ ಮೂವರನ್ನ ಬಂಧಿಸಲಾಗಿದೆ

ಪ್ರಜ್ವಲ್ ಬಂದ್ಮೇಲೆ ತೀವ್ರಗತಿಯಲ್ಲಿ ವಿಚಾರಣೆ ನಡೆಯಲಿದೆ. ಈಗಿರುವ ಮಾಹಿತಿ ಪ್ರಕಾರ ರೇವಣ್ಣರನ್ನು ಬಂಧಿಸಿ, ಮಾಹಿತಿ ಪಡೆಯಲಾಗುತ್ತಿದೆ. ದೂರು ಕೊಟ್ಟವರಿಂದ ಮಾಹಿತಿ ಪಡೆಯಲಾಗ್ತಿದೆ. ಮೂವರನ್ನ ಬಂಧಿಸಲಾಗಿದೆ. ಹೆಚ್ಚಿನ ವಿವರಣೆ ಕೊಡಲು ಸಾಧ್ಯವಿಲ್ಲ. ನಾವು ಹೇಳಲು ಸಾಧ್ಯವಿಲ್ಲ. ಯಾವುದನ್ನೂ ನಾವು ಮುಚ್ಚಿಡೋದಕ್ಕೆ‌ ಆಗಲ್ಲ. SIT ಅವರು ಇಂದು ಮುಚ್ಚಿಡಬಹುದು. ಆದ್ರೆ, ನಾಳೆ ಹೊರಗೆ ಬರುತ್ತಲ್ವಾ? ಎಂದು ಪ್ರಶ್ನಿಸಿದ್ದಾರೆ.

ಯಾರೂ ಪ್ರಭಾವ ಬೀರಲು ಸಾಧ್ಯವಿಲ್ಲ

ವಕೀಲ ದೇವರಾಜೇಗೌಡ SIT ವಿರುದ್ಧ ಆರೋಪ ಮಾಡಿರುವ ಬಗ್ಗೆ ಮಾತನಾಡಿ, ಪ್ರಕರಣದಲ್ಲಿ ಯಾರೂ ಕೂಡ ಪ್ರಭಾವ ಬೀರಲು ಸಾಧ್ಯವಿಲ್ಲ. ನಾವ್ಯಾರೂ ಹೀಗೆ ಮಾಡಿ ಅಂತ ಇನ್ಸ್‌ಸ್ಟ್ರಕ್ಷನ್ ಕೊಟ್ಟಿಲ್ಲ. SIT ಅಧಿಕಾರಿ ಡಿಲೀಟ್ ಮಾಡಿ ಅಂತ ಹೇಳಿದ್ರೆ, ಅದನ್ನ ಮುಖ್ಯಸ್ಥರು ಗಮನಿಸ್ತಾರೆ. ಅವರು ಕ್ರಮ ತೆಗೆದುಕೊಳ್ತಾರೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES