Friday, May 3, 2024

ಇಬ್ಬರು ಮಕ್ಕಳನ್ನು ಬೆಂಕಿಗೆ ಎಸೆದು ಆತ್ಮಹತ್ಯೆಗೆ ಶರಣಾದ ತಾಯಿ!

ಚಿತ್ರದುರ್ಗ : ತನ್ನಿಬ್ಬರು ಮಕ್ಕಳನ್ನು ಬೆಂಕಿಗೆ ಎಸೆದ ತಾಯಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ನಡೆದಿದೆ.

ನಯನ್​ (04), ಹರ್ಷವರ್ಧನ್​(02), ಮೃತ ಮಕ್ಕಳಾದರೆ, ಮಾರಕ್ಕ (24) ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ.

ಇದನ್ನೂ ಓದಿ : ಅಕ್ರಮ ಸಂಬಂಧ : ಗ್ರಾಮಕ್ಕೆ ಬರುವ ಮೊದಲೇ ಬಿತ್ತು ಇಬ್ಬರ ಹೆಣ

ಬಹಿರ್ದೆಸೆಗೆ ತೆರಳಿದ್ದಾಗ ಬೇಲಿಗೆ ಬೆಂಕಿ ಹಚ್ಚಿದ ಮಹಿಳೆ ತನ್ನಿಬ್ಬರು ಮಕ್ಕಳನ್ನು ಬೆಂಕಿಗೆ ಎಸೆದೆ ತಾನೂ ಕೂಡ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ, ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಇನ್ನು, ಘಟನಾ ಸ್ಥಳಕ್ಕೆ ತಳಕು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES