Saturday, April 27, 2024

ಪಿಡಿಓಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ರೇವಣ್ಣ: ಲೋಕಸಭಾ ಚುನಾವಣೆ ಹೊತ್ತಲ್ಲೇ ಮತ್ತೊಂದು ವಿವಾದ

ಮಂಡ್ಯ: ಎಲೆಕ್ಷನ್ ಹೊತ್ತಲ್ಲೇ ಹೆಚ್​.ಡಿ ರೇವಣ್ಣ ಮತ್ತೊಂದು ವಿವಾದದಲ್ಲಿ ಸಿಲಿಕಿಕೊಂಡಿದ್ದಾರೆ. ಪಿಡಿಒ ಶಶಿಕುಮಾರ್‌ಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶುಕ್ರವಾರ ಮಂಡ್ಯ ಜಿಲ್ಲೆಯ ಹತ್ತಿಹಳ್ಳಿ ಗ್ರಾಮಕ್ಕೆ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ನೀರಿನ ಸಮಸ್ಯೆ ವಿಚಾರಕ್ಕೆ ಪಿಡಿಒ ಶಶಿಕುಮಾರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೆಣ್ಣು ಮಕ್ಕಳಿಂದ ನಿನಗೆ ಹೊಡೆಸುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಸ್ಥಳದಲ್ಲೆ ಇದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದ ಲೈವ್​ನಲ್ಲಿ ಚಿತ್ರಿಸಿದ್ದಾರೆ.

ಇದನ್ನೂ ಓದಿ: 7ನೇ ವೇತನ ಆಯೋಗ ವರದಿ ಸಲ್ಲಿಕೆ: ವರದಿಯ ಶಿಫಾರಸು ಪರಿಶೀಲಿಸಿ, ಸೂಕ್ತ ತೀರ್ಮಾನ- ಸಿಎಂ ಸಿದ್ದರಾಮಯ್ಯ

ಈ ವೇಳೆ ತಹಶೀಲ್ದಾರ್‌, ಆರ್‌ಐ, ಪಿಎಸ್‌ಐ ಕೂಡ ಉಪಸ್ಥಿತರಿದ್ದರು. ನೀರಿನ ಸಮಸ್ಯೆ ಇಲ್ಲದಿದ್ದರು ಅಧಿಕಾರಿಗೆ ನಿಂದಿಸಿದರಾ ಎಂಬ ಪ್ರಶ್ನೆ ಮೂಡಿದ್ದು, ಬೇಕಂತಲೇ ನಿಂದಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES