Friday, May 10, 2024

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಯೋಗ್ಯತೆ ಸರ್ಕಾರಕ್ಕಿಲ್ಲ: ಆರ್​.ಅಶೋಕ್​

ಬೆಂಗಳೂರು: ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ ಇದನ್ನು ಬಗೆಹರಿಸುವ ಯೋಗ್ಯತೆ  ಸರ್ಕಾರಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗಿದೆ.ಕಮರ್ಷಿಯಲ್ ನಲ್ಲಿ ಆಸ್ಪತ್ರೆ ಕೂಡ ಬರಲಿದೆ. ದೆಹಲಿಯಲ್ಲಿ ಹೋಗಿ ಕೂತು ಸಚಿವರು ಮಾಹಿತಿ ಕೊಟ್ಟಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ ಈ ಸರ್ಕಾರಕ್ಕೆ ನೀರಿನ ಸಮಸ್ಸೆಯನ್ನು ಬಗೆಹರಿಸುವ ಯೋಗ್ಯತೆನೇ ಇಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಅಲೆಯನ್ಸ್ ಆಗಿ, ಟಿಕೆಟ್ ಹಂಚಿಕೆ ಕೂಡ ಆಗಿದೆ. ಹೆಚ್ಚು ಸೀಟು ಪಡೆಯಲೇ ನೀರು ಬಿಟ್ಟಿದ್ದಾರೆ ಅನ್ನೋದು ನನ್ನ ನೇರ ಆರೋಪ. ಟ್ರಿಬ್ಯೂನಲ್ ಆದೇಶ ಬರೋ ಮೊದಲೇ ನೀರು ಬಿಟ್ಟಿದ್ ಬೆಂಗಳೂರು, ಮಂಡ್ಯದಲ್ಲಿ ನೀರಿಗೆ ಹಾಹಾಕಾರ ಬಂದಿದ್ದಾರೆ ಅದಕ್ಕೆ ನೇರವಾಗಿ ಕಾಂಗ್ರೆಸ್ ಕಾರಣ. ಜನ ಬೀದಿಗೆ ಬರೋ ರೀತಿ, ಗುಳೆ ಹೋಗೋ ರೀತಿ ಮಾಡಿದ್ದಾರೆ. ಬೆಂಗಳೂರಿಗೆ ಅಪಕೀರ್ತಿ ತಂದಿದ್ದಾರೆ.

ಸುಳ್ಳು ಜಾಹೀರಾತು ನೀಡಿ ಪ್ರಚಾರ ತಗೆದುಕೊಳ್ಳುತ್ತಿದ್ದಾರೆ.

ಸುಳ್ಳು ಜಾಹೀರಾತುಗಳನ್ನು ಕಾಂಗ್ರೆಸ್​ ಸರ್ಕಾರ ನೀಡಿ.ಕೇಂದ್ರದ ಕೆಲಸವನ್ನು ನಮ್ಮದೇ ಅಂತ ತೋರಿಸ್ತಿದ್ದಾರೆ ಅಷ್ಟು ಬರಗೆಟ್ಟು ಇವರು ಆಡಳಿತ ನಡೆಸುತ್ತಿದ್ದಾರೆ.ಈ ರೀತಿ ಜಾಹೀರಾತು ನೀಡೋದಾದ್ರೆ ಮೋದಿ ಅವರ ಫೋಟೋವನ್ನೂ ಹಾಕಲಿ. ಅನ್ನಭಾಗ್ಯ ಅಂತ ಸಿದ್ದರಾಮಯ್ಯ ಹೇಳಿದ್ರು.ಅದು ನಿಮ್ಮದಲ್ಲ ಮೋದಿ ಅವರ ಯೋಜನೆ.

ಎರಡು ಬಾರಿ ನಾನು, ಯಡಿಯೂರಪ್ಪ, ಬೊಮ್ಮಾಯಿ, ವಿಜಯೇಂದ್ರ, ಜೋಶಿ ಎಲ್ಲರನ್ನೂ ಹೈಕಮಾಂಡ್ ಕರೆಸಿದ್ರು, ಅಮಿತ್ ಶಾ, ನಡ್ಡಾ ಅವರ ಜೊತೆ ಒಂದು ಸಭೆ ಆಗಿತ್ತು ನಂತರ ಮೋದಿ ಅವರು ಸಹ ಇದ್ದರು.      ಹೊಸಬರಿಗೆ ಅವಕಾಶ ನೀಡಲಾಗಿದೆ. ಹಳೆ‌ ಬೇರು, ಹೊಸ ಚಿಗುರು ಇದು ಬಿಜೆಪಿ ಪಕ್ಷದ ಟಿಕೆಟ್ ಸಿಗೋದಿಲ್ಲ ಅಂತ ಹೇಳಿಕೆ ಕೋಡೋದು ಸರಿಯಲ್ಲ. ನಿಮಗೆ ನೀವೇ ಊಹೆ ಮಾಡಿಕೊಳ್ಳಬೇಡಿ. ನಮಗೆ ಟಿಕೆಟ್ ಸಿಗುತ್ತೆ ಅಂತ ಬಾವಿಸಿ.28ಕ್ಕೆ 28 ಗೆಲ್ಲಬೇಕಿದೆ. ಅದಕ್ಕೆ ಕೆಲಸ‌ ಮಾಡೋಣ ಎಂದರು.

ನಮ್ಮ ಪಕ್ಷದಲ್ಲಿ ಬಂಡಾಯ ಮಾಡುವ ಅಭ್ಯರ್ಥಿ ಇಲ್ಲ.

ನಮ್ಮ ಪಕ್ಷದಲ್ಲಿ ಯಾವ ಅಭ್ಯರ್ಥಿ ಬಂಡಾಯ ಮಾಡುವುದಿಲ್ಲ ಟಿಕೆಟ್​ ಸಿಗದಿದ್ದರೂ ನಮ್ಮಅಭ್ಯರ್ಥಿ ಮೋದಿಯವರ ಗೆಲುವಿಗಾಗಿ ಕೆಲಸ ಮಾಡುತ್ತಾರೆ.

ಕೋಮು ಭಾವನೆ ಸೃಷ್ಟಿ ಮಾಡೋಕೆ ಪ್ರಯತ್ನ ಮಾಡ್ತಿದೆ

ಕೇಂದ್ರ ಸರ್ಕಾರ CAA ಕಾಯ್ದೆಯನ್ನ ಸ್ವಾಗತ ಮಾಡ್ತೀವಿ.ಕಾಂಗ್ರೆಸ್ ಕೋಮು ಭಾವನೆ ಸೃಷ್ಟಿ ಮಾಡೋಕೆ ಪ್ರಯತ್ನ ಮಾಡ್ತಿದೆ.ಈಗಾಗಲೇ ಕಾಯ್ದೆಯಲ್ಲಿ ಸ್ಪಷ್ಟವಾಗಿ ಇದೆ. ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಇದು ಅನ್ವಯ ಆಗೊಲ್ಲ.ಬೇರೆ ದೇಶದ ಅಲ್ಪಸಂಖ್ಯಾತರಿಗೆ ಇದು ಅನ್ವಯ ಆಗುತ್ತದೆ. ಕಾಂಗ್ರೆಸ್ ಗೆ ಮಾನವೀಯತೆಯ ಕೊರತೆ ಇದೆ‌.ಕಾಂಗ್ರೆಸ್ ಗೆ ಕಾಮಾಲೆ ಕಣ್ಣು ‌ ಅಲ್ಪಸಂಖ್ಯಾತ ಮತ ಒಲೈಕೆಗಾಗಿ CAA ವಿರೋಧ ಮಾಡ್ತಿದೆ.ಇದು ಕೇಂದ್ರದ ಕಾಯ್ದೆ. ಯಾರು ಒಪ್ಪಲಿ ಬಿಡಲಿ ದೇಶದಲ್ಲಿ ಈ ಕಾಯ್ದೆ ಜಾರಿ ಮಾಡಲಿದೆ.

 

RELATED ARTICLES

Related Articles

TRENDING ARTICLES