Thursday, May 2, 2024

ರಾಜ್ಯದಲ್ಲಿ ಗೋಬಿ, ಬಾಂಬೆ ಮಿಠಾಯಿ ಬ್ಯಾನ್? ನಾಳೆ ಅಧಿಕೃತ ಆದೇಶ

ಬೆಂಗಳೂರು: ಗೋಬಿ ಪ್ರಿಯರಿಗೆ ನಾಳೆ ಶಾಕ್​ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ನಾಳೆ ರಾಜ್ಯದಲ್ಲಿ ಗೋಬಿ ಮಂಚೂರಿ ಹಾಗೂ ಬಾಂಬೆ ಮಿಠಾಯಿ ನಾಳೆ ಬ್ಯಾನ್ ಆಗುತ್ತಾ..? ಇಲ್ಲವೋ ಎಂಬುವುದರ ಭವಿಷ್ಯ ನಾಳೆ ನಡೆಯುವ ಸಭೆಯಲ್ಲಿ ತಿರ್ಮಾನವಾಗುತ್ತದೆ.

ಹೌದು, ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆಯಾಗಿದ್ದು,ಈಗಲೇ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ನಾಳೆ ಹೊರಬೀಳುವ ಸಾದ್ಯತೆ ಹೆಚ್ಚಾಗಿದೆ.

ಹೊರರಾಜ್ಯಗಳಲ್ಲಿ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಬ್ಯಾನ್ ಆಗಿದೆ. ಕಾರಣ ಕಲಬೆರಕೆ ಕಲರ್ ಬಳಕೆ ಮಾಡೋದು ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಆಹಾರ ಮತ್ತು ಸುರಕ್ಷತಾ ಇಲಾಖೆ ಹೋಟೆಲ್, ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಬಳಿ ಕಾಂಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್ ಮಾಡಿದೆ.

ಇದನ್ನೂ ಓದಿ: ಗೋವಾ ಬೆನ್ನಲ್ಲೇ ಕರ್ನಾಟಕದಲ್ಲೂ ಗೋಬಿ ಮಂಚೂರಿ ಬ್ಯಾನ್?

ಈ ಟೆಸ್ಟ್ ನಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ರಂಡೋಮನ್ ಬಿ ಅಂಶ ಇರೋದು ಪತ್ತೆಯಾಗಿದೆ. ಜೊತೆಗೆ ಗೋಬಿ ಮಂಚೂರಿಗೆ ಹಾಕುವ ಕಲರ್ ಜಲ್ಲಿಗಳನ್ನ ಟೌನ್ ಟೆಸ್ಟ್ ಗೆ ಒಳಪಡಿಸಿದಾಗ ಅದರಲ್ಲೂ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲೂ ಬ್ಯಾನ್ ಮಾಡುವ ಸಾಧ್ಯತೆ ಇದೆ.

ಕೃತಕ ಬಣ್ಣ ಬೆರಸಿ ಗೋಬಿ ಮಾಡುವುದಕ್ಕೆ ಅವಕಾಶ ಇಲ್ಲ.

ಆಹಾರ ಸುರಕ್ಷತೆ ಕಾಯ್ದೆಯಡಿ 10 ಲಕ್ಷದ ವರೆಗೂ ದಂಡ ವಿಧಿಸುವ ಸಂಭವ ಇದೆ. ಈ ಬಗ್ಗೆ ನಾಳೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ಇದೆ.

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯಲ್ಲಿ ಹಾನಿಕಾರಕ ಅಂಶ ಇರೋದು ವರದಿಯಲ್ಲಿ ಕನ್ಫರ್ಮ್ ಆಗಿದ್ದು ಆರೋಗ್ಯ ಸಚಿವರಿಗೆ ವರದಿ ಕೈ ಸೇರಿದೆ. ಆರೋಗ್ಯ ಸಚಿವರು ಕಾಟನ್ ಕ್ಯಾಂಡಿ ಬ್ಯಾನ್ ಮಾಡಿ ಗೋಬಿ ಮಂಚೂರಿಗೆ ಬಳಸೋ ಪದಾರ್ಥಗಳಿಗೆ ಪ್ರತ್ಯೇಕ ಗೈಡ್ ಲೈನ್ಸ್ ಬಿಡುಗಡೆ ಮಾಡ್ತಾರಾ ಇಲ್ಲ ಬ್ಯಾನ್​ ಮಾಡುತ್ತರೋ ಇಲ್ಲವೋ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES