Sunday, May 12, 2024

ಗೋವಾ ಬೆನ್ನಲ್ಲೇ ಕರ್ನಾಟಕದಲ್ಲೂ ಗೋಬಿ ಮಂಚೂರಿ ಬ್ಯಾನ್?

ಬೆಂಗಳೂರು : ಸಂಜೆ ಆದ್ರೆ ಸಾಕು ಎಲ್ಲರೂ ಗೋಬಿ ತಿನ್ನಲು ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ರುಚಿರುಚಿಯಾದ ಗೋಬಿ ಚಪ್ಪರಿಸೋ ಆ ಗೋಬಿ ಪ್ರಿಯರಿಗೆ ಶಾಕ್ ನೀಡುವ ಚಿಂತನೆ ನಡೆಯುತ್ತಿದೆ. ಅರೆ ಏನಪ್ಪ ಗೋಬಿನಾ ಬ್ಯಾನ್ ಮಾಡುತ್ತಿದ್ದಾರಾ? ಯಾಕೆ ಈ ನಿರ್ಧಾರ ಅನ್ನೋದು ಗೊತ್ತಾಗಬೇಕಾ? ಈ ಸುದ್ದಿ ಓದಿ.

ಗೋಬಿ ಮಂಚೂರಿ ಎಲ್ಲರ ಫೇವರೇಟ್. ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರಿಸೋ ತಿಂಡಿ. ಆದ್ರೀಗ, ಗೋಬಿಗೆ ಕಂಟಕ‌ ಶುರುವಾಗಿದೆ. ಗೋವಾ ರೀತಿಯಲ್ಲಿ ರಾಜ್ಯದಲ್ಲೂ ಗೋಬಿ ಬ್ಯಾನ್ ಮಾಡಲು ಎಲ್ಲ ರೀತಿಯ ತಯಾರಿಗಳು ನಡೆಯುತ್ತಾ ಇದ್ದು, ಆದಷ್ಟೂ ಬೇಗ ಗೋಬಿ ಪ್ರಿಯರಿಗೆ ಶಾಕ್ ನೀಡುವ ಸಾಧ್ಯತೆಗಳಿವೆ.

ಗೋಬಿ ಮಂಚೂರಿ ಮಾಡಲು ಬಳಸುವ ಮೈದಾ, ಸಾಸ್, ಕೃತಕ ಬಣ್ಣ ಹಾಗೂ ಟೇಸ್ಟಿಂಗ್ ಪೌಡರ್‌ಗಳೆಲ್ಲವೂ ಜೀವಕ್ಕೆ ಅಪಾಯಾಕಾರಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ. ಮುಖ್ಯವಾಗಿ ಮೈದಾ, ಚೈನೀಸ್ ಸಾಸ್‌ಗಳು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಮಾಡುತ್ತದೆ. ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸಿ ರಕ್ತದೊತ್ತಡದ ಜೊತೆಗೆ ತೂಕವನ್ನು ಕೂಡ ಹೆಚ್ಚಿಸುತ್ತದೆ. ಇದರಿಂದಾಗಿ ದೇಹದ ಕೊಬ್ಬಿನ ಅಂಶಗಳು ಹೆಚ್ಚಾಗಿ ಹೃದಯದ ರಕ್ತನಾಳ ಕ್ಲೋಸ್ ಆಗುವ ಸಾಧ್ಯತೆ ಇದ್ದು, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮೂತ್ರಕೋಶಕ್ಕೆ ಸಂಬಂಧಿಸಿದಂತಹ ಖಾಯಿಲೆಗಳು ಮನುಷ್ಯನನ್ನು ಕಾಡೋ ಸಾಧ್ಯತೆಯಿದೆ.

ಗೋಬಿಯಲ್ಲಿ ಅಪಾಯಕಾರಿ ವಸ್ತುಗಳು

ಇನ್ನೂ, ತಮಿಳು ನಾಡಿನಲ್ಲಿ ಕಾಟನ್ ಕ್ಯಾಂಡಿಗಳನ್ನು ಬ್ಯಾನ್ ಮಾಡಲಾಗಿದೆ. ಅದರಂತೆ ರಾಜ್ಯದಲ್ಲಿ ಈಗಾಗಲೇ ಕಾಟನ್ ಕ್ಯಾಂಡಿಯ ಸ್ಯಾಂಪಲ್‌ಗಳನ್ನ ಟೆಸ್ಟಿಂಗ್‌ಗೆ ಕಳುಹಿಸಲಾಗಿದೆ. ಕಾಟನ್ ಕ್ಯಾಂಡಿ ಬೆನ್ನಲ್ಲೇ ಗೋಬಿಯ ಸ್ಯಾಂಪಲ್‌ನ್ನು ಕೂಡ ಆರೋಗ್ಯ ಇಲಾಖೆ ಟೆಸ್ಟ್ ಮಾಡಲು ಸೂಚಿಸಿದ್ದು, ಒಂದು ವೇಳೆ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯಲ್ಲಿ ಅಪಾಯಕಾರಿ ವಸ್ತುಗಳು ಕಂಡು ಬಂದಲ್ಲಿ ನಮ್ಮ ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಬ್ಯಾನ್ ಆಗಲಿದೆ.

ಗೋಬಿ ಬ್ಯ್ಲಾಕ್ ಲೀಸ್ಟ್​ಗೆ ಸೇರಿಸುವ ಚಿಂತನೆ

ಗೋವಾದಲ್ಲಿ ಗೋಬಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿದಂತೆ ರಾಜ್ಯದಲ್ಲೂ ಗೋಬಿ ಬ್ಯಾನ್ ಮಾಡಿ, ಈ ಆಹಾರ ಪದಾರ್ಥವನ್ನು ಬ್ಯ್ಲಾಕ್ ಲೀಸ್ಟ್​ಗೆ ಸೇರಿಸುವ ಚಿಂತನೆ ನಡೆಯುತ್ತಿದೆ. ಈ ಮೆಗಾ ಡ್ರೈವ್ ನಲ್ಲಿ ಆರೋಗ್ಯ ಇಲಾಖೆಯ ಜೊತೆಗೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಕೂಡ ಕೈ ಜೋಡಿಸಿದೆ.

ಒಟ್ನಲ್ಲಿ ಆಹಾರ ಪ್ರಿಯರ ಫೇವರೆಟ್ ಗೋಬಿ ಮಂಚೂರಿ ಸಂಕಷ್ಟಕ್ಕೆ ಸಿಲುಕಿದ್ದು, ಅವುಗಳ ಸ್ಯಾಂಪಲ್ ಟೆಸ್ಟಿಗೆ ಕಳುಹಿಸಲಾಗಿದೆ. ಗೋಬಿ ಗುಣಮಟ್ಟ ಪರೀಕ್ಷೆಯಲ್ಲಿ ಪಾಸ್ ಆಗುತ್ತಾ? ಇಲ್ಲ ಫೇಲ್ ಆಗುತ್ತಾ? ಎನ್ನುವುದನ್ನು ಟೆಸ್ಟಿಂಗ್‌ ರಿಪೋರ್ಟ್ ಬರುವವರೆಗೂ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES