Friday, May 10, 2024

ರಾಜ್ಯದಲ್ಲಿ ಎಣ್ಣೆ ಅಂಗಡಿಗಳು ಓಪನ್ ಇದೆ ಅದ್ರೆ ಕುಡಿಯಲು ನೀರಿಲ್ಲ: ಆರ್. ಅಶೋಕ್ ಲೇವಡಿ

ಬೆಂಗಳೂರು: ರಾಜ್ಯದಲ್ಲಿ ಎಣ್ಣೆ ಅಂಗಡಿಗಳು ಓಪನ್ ಇದೆ ಅದ್ರೆ ಕುಡಿಯುವ ನೀರಿನ ಟ್ಯಾಂಕ್ ಗಳು ಕ್ಲೋಸ್ ಆಗಿವೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕಡೆ ನೀರಿಲ್ಲ ನೀರಿಲ್ಲ ಅನ್ನೋ ವಾತಾವರಣ ಇದೆ.ನಾವು ಸರ್ಕಾರದ ವಿರುದ್ಧ ಸೋಮವಾರ ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ ಬೃಹತ್ ಪ್ರತಿಭಟನೆಯನ್ನು ರಾಜ್ಯಾದ್ಯಂತ ಮಾಡುತ್ತೇವೆ.

ಈ ಸರ್ಕಾರ ಜನರಿಗೆ,ರೈತರಿಗೆ ನೀರು ಕೊಡುವಲ್ಲಿ ವಿಫಲ ಆಗಿದೆ. ಕುಡಿಯುವ ನೀರಿಗೆ ಆದ್ಯತೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ನಾಯಕ ರಾಹುಲ್ಲಾ ಏನಿಲ್ಲ ಏನಿಲ್ಲ: ಆರ್. ಅಶೋಕ್​

ಬರೀ ಟ್ಯಾಂಕರ್‌ಗೆ ದರ ನಿಗದಿ ಮಾಡೋದಲ್ಲ.ಕುಡಿಯುವ ನೀರನ್ನ ಕೊಡಬೇಕು.ಹೇಮಾವತಿ,ಕಬಿನಿ ಇಂದಲೋ ನೀರು ತನ್ನಿ.ತಮಿಳು ನಾಡಿಗೆ ನೀರು ಬಿಡದಿದ್ರೆ ನಮಗೆ 5-6 TMC ನೀರು ಉಳಿಯುತ್ತಿತ್ತು.ನೀರಿಗೆ ಸಮಸ್ಯೆ ಆಗ್ತಿರಲಿಲ್ಲ. ಆದ್ರೆ ಸುಪ್ರೀಂ ಕೋರ್ಟ್ ತೀರ್ಪು ಬರುವ ಮೊದಲೇ ನೀರು ಬಿಟ್ಟವರು ಇವರು.ಬರಗಾಲ ನಿಭಾಯಿಸಲು ಸಾಧ್ಯವಾಗ್ತಿಲ್ಲ.ಇದು ದಿಕ್ಕು ದೆಸೆ ಇಲ್ಲದ ಸರ್ಕಾರ ಎಂದು ಕಿಡಿಕಾರಿದ್ದರು.

 

RELATED ARTICLES

Related Articles

TRENDING ARTICLES