Thursday, May 9, 2024

ಕುರಾನ್ ನಮಗೆ ಯಾಕೆ ಇಪಾರ್ಟೆಂಟ್ ಅಂದ್ರೆ.. : ಡಾ.ಕುಂ ವೀರಭದ್ರಪ್ಪ

ರಾಯಚೂರು : ಕುರಾನ್ ಬಗ್ಗೆ ಹೇಳಿದ್ರೆ ಮುಸ್ಲಿಂ ಪರ ಮಾತನಾಡುತ್ತೇನೆ ಅಂತಲ್ಲಾ.. ಕುರಾನ್ ನಮಗೆ ಯಾಕೆ ಇಪಾರ್ಟೆಂಟ್ ಅನಿಸುತ್ತದೆ ಅಂದ್ರೆ.. ಒಳ್ಳೆಯದು ಎಲ್ಲಿದೆ ಅದನ್ನು ನಾವು ಸ್ವೀಕರಿಸಬೇಕು ಎಂದು ಸಾಹಿತಿ ಡಾ‌.ಕುಂ ವೀರಭದ್ರಪ್ಪ ಹೇಳಿದರು.

ರಾಯಚೂರಲ್ಲಿ ಮಾತನಾಡಿದ ಅವರು, ಮುಂದೆ ರೋಜಾ, ಹಜ್, ರಜಾಕ್ ಇವೆಲ್ಲಾ ಶುರುವಾಗುತ್ತವೆ. ಅದೆಲ್ಲಾ ಇನ್ನೊಬ್ಬರಿಗೆ ಕೊಡಬೇಕು ಅಂತ ಹೇಳುತ್ತವೆ ಎಂದು ತಿಳಿಸಿದರು.

ಬಸವಣ್ಣ ಹೇಳಿದ್ದಾನೆ ಅದು  ನಮ್ಮದು. ಮೊಹಮ್ಮದ್ ಪೈಗಂಬರ್ ಹೇಳಿದ್ದು ನಮ್ಮದು. ಯೇಸು ಕ್ರಿಸ್ತನು ಹೇಳಿದ್ದು ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕಪಾಳಕೊಡು ಅಂತ. ತಿರುಪತಿಯಲ್ಲಿ ನೋಡಿದ್ರೆ ನಿಜಕ್ಕೂ ಅತ್ಯಂತ ಅಸಹ್ಯಕರವಾದದ್ದು. ದೇವರ ಹುಂಡಿಗೆ ಕೋಟಿಗಟ್ಟಲೆ ಹಣ, ಬಂಗಾರ ಹಾಕೋದು ಅಸಹ್ಯ ಎಂದು ಹೇಳಿದರು.

ತಿರುಪತಿ ಹುಂಡಿಗೆ ಹಾಕುವವರು ಡ್ಯಾಶ್

ಇವರೆಲ್ಲರೂ ನಿಜವಾಗಿಯೂ ಈ ದೇಶದ ದೊಡ್ಡ ಡ್ಯಾಶ್ ಡ್ಯಾಶ್.. ಮುಂದೆ ನಾನು ಹೇಳುವುದಿಲ್ಲ. ಇವನು ಹಿಂದೂ ದ್ರೋಹಿ ಅಂತಾರೆ, ಅದು ದೊಡ್ಡ ಪ್ರಾಬ್ಲಂ. ಮುಸಲ್ಮಾನರನ್ನ ಹೊಗಳಿದ ತಿರುಪತಿ ಹುಂಡಿಗೆ ಹಾಕುವವರನ್ನ ಡ್ಯಾಶ್ ಇಟ್ಟ ಅಂತಾರೆ. ಬಡವರಿಗೆ ದಾನ ಮಾಡಿ ಒಳ್ಳೆಯ ಕಾರ್ಯಗಳನ್ನ ಮಾಡಿ ಎಂದು ತಿಳಿಸಿದರು.

ಪಾಪ ಮಾಡಿದ್ದೀನಿ, ಭ್ರಷ್ಟಾಚಾರ ಮಾಡಿದ್ದೀನಿ

ದೇವರಿಗೆ ಹಾಕೋದು ದಾನವಲ್ಲ, ನಾವು ಮಾಡಿರತಕ್ಕಂತ ಪಾಪದ ಪ್ರಾಯಶ್ಚಿತ್ತದ ಒಂದು ಮುಖ. ಪಾಪವನ್ನ ರಿನಿವಲ್ ಮಾಡತಕ್ಕಂತದ್ದು. ನಾನು ಇಷ್ಟೊಂದು ಪಾಪ ಮಾಡಿದ್ದೀನಿ, ಭ್ರಷ್ಟಾಚಾರ ಮಾಡಿದ್ದೀನಿ. ಇಷ್ಟು ಜನರನ್ನ ಹಾಳು ಮಾಡಿದ್ದೀನಿ. ದಯವಿಟ್ಟು ಇದನ್ನ ಕ್ಷಮಿಸಿ. ಹೊಸದಾಗಿ ಪಾಪ ಮಾಡಲಿಕ್ಕೆ ಅವಕಾಶ ಮಾಡಿಕೊಡು ಅನ್ನೋದು ಎಂದು ಡಾ.ಕುಂ ವೀರಭದ್ರಪ್ಪ ಹೇಳಿದರು.

RELATED ARTICLES

Related Articles

TRENDING ARTICLES