Friday, May 10, 2024

ರಂಜಾನ್​​ಗೆ ಶಾಲಾ ಸಮಯ ಬದಲಾವಣೆ

ಬೆಂಗಳೂರು: ಮಾರ್ಚ್​​​ನಲ್ಲಿ ಆರಂಭವಾಗುವ ರಂಜಾನ್ ಹಬ್ಬಕ್ಕೆ ಉರ್ದು ಶಾಲೆಯ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಉರ್ದು ಪ್ರಾಥಮಿಕ, ಪ್ರೌಢ ಶಾಲೆಗಳ‌ ವಿದ್ಯಾರ್ಥಿಗಳಿಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.45ರ ವರೆಗೆ ತರಗತಿ ನಡೆಸಲು ಆದೇಶ ಹೊರಡಿಸಲಾಗಿದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಉರ್ದು ಪ್ರಾಥಮಿಕ, ಹಿರಿಯ, ಪ್ರೌಢ ಶಾಲೆಗಳಿಗೆ ಏಪ್ರಿಲ್​ 10ರ ತನಕ ಈ ಆದೇಶ ಅನ್ವಯವಾಗಲಿದೆ. ಇತರೆ ಶಾಲೆಗಳಲ್ಲಿ ಓದುತ್ತಿರುವ ಮುಸ್ಲಿಂ ‌ವಿದ್ಯಾರ್ಥಿಗಳಿಗೆ ತರಗತಿ ಮುಗಿಯುವ ಅರ್ಧ ಗಂಟೆ ಮುಂಚೆಯೇ ತೆರಳಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ಇದನ್ನೂ ಓದಿ: ಕರಟಕ ದಮನಕ ಮೂವಿ ರಿವ್ಯೂ: ಹೇಗಿದೆ ಗೊತ್ತಾ ಶಿವಣ್ಣ ಪ್ರಭುದೇವ ಜುಗಲ್ಬಂದಿ?

ಉರ್ದು ಶಿಕ್ಷಕರ ಸಂಘ, ರಾಜ್ಯಭಾಷಾ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘ, ಶಾಸಕ ರಿಜ್ವಾನ್ ಅರ್ಷದ್ ಮನವಿ ಮೇರೆಗೆ ಈ ಆದೇಶವನ್ನ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

RELATED ARTICLES

Related Articles

TRENDING ARTICLES