Saturday, May 11, 2024

ಹಿಂದೂ ಸಮಾಜ ಬಾಂಬ್​ ದಾಳಿಗಳಿಗೆ ಬೆದರುವುದಿಲ್ಲ : ಪ್ರಮೋದ್​ ಮುತಾಲಿಕ್​

ಬೆಂಗಳೂರು : ರಾಮೇಶ್ವರಂ ಕೆಫೆ ಮೇಲೆ ನಡೆದಂತ ದಾಳಿಗಳಿಗೆ ಹಿಂದೂ ಸಮಾಜ ಯಾವತ್ತು ಬೆದರಿಲ್ಲ, ಬೆದರುವುದೇ ಇಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

ಕುಂದ್ಲಹಳ್ಳಿಯಲ್ಲಿನ ರಾಮೇಶ್ವರಂ ಕೆಫೆ ದಾಳಿಯ ಬಳಿಕ ಇಂದು ಮತ್ತೆ ಆರಂಭವಾಗುತ್ತಿರುವ ಹಿನ್ನೆಲೆ ಪೂಜಾ ಕಾರ್ಯಗಳು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುತಾಲಿಕ್ ಮತ್ತು ಕಾರ್ಯಕರ್ತರು​ ಭಾಗಿಯಾಗುವ ಮುನ್ನ ಮಾದ್ಯಮದೊಂದಿಗೆ ಪ್ರತ್ರಿಕ್ರಿಯೆ ನೀಡಿದರು.

ಇದನ್ನೂ ಓದಿ: Sudha Murthy: ರಾಜ್ಯಸಭೆಗೆ ಸುಧಾಮೂರ್ತಿ ನಾಮ ನಿರ್ದೇಶನ

ಇಸ್ಲಾಂಮಿಕ್​ ಶಕ್ತಿಗಳು ಭಯೋತ್ಪಾದನೇ ಮೂಲಕ ಇಸ್ಲಾಂ ಪ್ರತಿಷ್ಟಾಪನೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೇ ಇದು ಸಾಧ್ಯವಿಲ್ಲ ಎನ್ನುವುದಕ್ಕೆ ರಾಮೇಶ್ವರಂ ಕೆಫೆ ಮತ್ತೆ ಉದ್ಗಾಟನೆಯಾಗುತ್ತಿರುವುದೇ ಸಾಕ್ಷಿ ಎಂದರು.

ಪರಪ್ಪನ ಅಗ್ರಹಾರದ ಜೈಲಿನ ವಿಷಯವನ್ನ ನಾವೇ ಹೇಳಿದ್ದು, ದೊಡ್ಡಬಳ್ಳಾಪುರದಲ್ಲಿ 30 ಟನ್​ ಗಳ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರನ್ನು ನಮ್ಮ ಕಾರ್ಯಕರ್ತರು ಹಿಡಿದಿದ್ದರು, ಇರನ್ನು 48 ದಿನಗಳ ಕಾಲ ಒಳಗಡೆ ಹಾಕಿದ್ದರು , ಈ ವೇಳೆ ಅಗ್ರಹಾರದಲ್ಲಿದ್ದ ಪಾಕಿಸ್ತಾನಿ, ಬಾಂಗ್ಲಾದೇಶ್​ ಭಯೋತ್ಪಾದಕರನ್ನು ಹಿಂಬಾಲಿಸಿ ಒಂದು ವರದಿ ಮಾಡಿದ್ದರು ಆ ವರದಿಯ ಮೂಲಕವೇ ಈ ಪ್ರಕರಣ ಹೊರಬಂದಿದೆ, ರಾಜಕಾರಣಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಇಂದು ಏನೇನು ಆಗುತ್ತಿದೆ ಎನ್ನುವುದನ್ನು ಅವರು ಗಮನಿಸಬೇಕು ಎಂದರು.

ಈ ಪ್ರಕರಣದ ತನಿಖೆಗೆ ಎನ್​ಐಎ ಮುಂದಾಗಿರುವುದು ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಬ್ಬರನ್ನು ವಿಚಾರಣೆ ನಡೆಸಿ ಬಂಧಿಸಿಸುತ್ತಿರುವುದನ್ನು ನಾವು ಅಭಿನಂದಿಸುತ್ತೇವೆ ಎಂದು ಅವರು ಹೇಳಿದರು.

 

RELATED ARTICLES

Related Articles

TRENDING ARTICLES