Thursday, May 9, 2024

ಬ್ಲಾಸ್ಟ್ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು: ಯತ್ನಾಳ್

ವಿಜಯಪುರ: ಉದ್ದೇಶಪೂರ್ವಕವಾಗಿ ಈ ಘಟನೆ ಮಾಡಿರಬಹುದು ಈ ಬಾಸ್ಟ್ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಪ್ರತಿಕ್ರಯಿಸಿದ ಅವರು, ಎನ್ಐಎದವರು ತನಿಖೆ  ಪ್ರಾರಂಭಿಸಿದ್ದಾರೆ. ಸತ್ಯ ಹೊರಗೆ ಬರಲಿದೆ. NIAಯವರು ಆಫ್ರಿಕಾದಿಂದ RSS ಮುಖಂಡ ರುದ್ರೇಶ ಹಂತಕ ಆಫ್ರೀಕಾದಲ್ಲಿದ್ದವನನ್ನು ಬಂಧನ ಮಾಡಿದ್ದಾರೆ. ಬ್ಲಾಸ್ಟ್ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು‌. ದೇಶದ ಆಂತರಿಕ ಭದ್ರತೆ ಮುಖ್ಯ.ಇದರಲ್ಲಿ ಯಾವುದೇ ರಾಜಕೀಯ ಮಾಡಬೇಡಿ ಎಂದರು.

ದೇಶಗಳಲ್ಲಿ ಅಸ್ಥಿರತೆ ಉಂಟು ಮಾಡಲು ಬ್ಲಾಸ್ಟ್ ಮಾಡಲಾಗಿದೆ. ದೇಶದಲ್ಲಿ ಭಯದ ವಾತಾವರಣ ಉಂಟು ಮಾಡುವ ಉದ್ದೇಶ ಇದು ಆಗಿರಬಹುದು ಎಂದರು.

ಸಚಿವ ಶರಣ ಪ್ರಕಾಶಪಾಟೀಲ್ ಹೇಳಿಕೆ ವಿಚಾರ ಪ್ರತಿಕ್ರಿಯೆಸಿದ ಅವರು ಶರಣಪ್ರಕಾಶ ಪಾಟೀಲ್ ಹಾಗೇನೇ ಹೇಳುತ್ತಾರೆ. ಕುಕ್ಕರ್ ಬ್ಲಾಸ್ಟ್ ಆದಾದ ನಮ್ಮ ಬ್ರದರ್ಸ್ ಮಾಡಿಲ್ಲ ಎಂದಿದ್ದರು. ಈಗ ಬ್ರದರ್ಸ್ ಏನ್ ಹೇಳ್ತಿದ್ದಾರೆ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿದ್ದರು.

ಕುಕ್ಕರ್ ಬ್ಲಾಸ್ಟ್ ಗೂ ರಾಮೇಶ್ವರ ಕೆಫೆ ಬ್ಲಾಸ್ಟ್ ಗೂ ಸಾಮ್ಯತೆಯಿದೆ ಎಂದು ಹೇಳುತ್ತಿದ್ದಾರೆ. ಸಿಎಂ ಬೇರೆ ಬೇರೆ ಎನ್ನುತ್ತಿದ್ದಾರೆ ಎರಡೂ ಬೇರೆ ಬೇರೆ ಇರ್ತಾವೆ ಎಂದ ಯತ್ನಾಳ ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES