Tuesday, April 30, 2024

ಬಡ ಹಳ್ಳಿ ಯುವತಿ ಈಗ ನ್ಯಾಯಾಧೀಶೆ!: ಸಾಧನೆಗೆ ಜನತೆ ಮೆಚ್ಚುಗೆ

ಬಾಗಲಕೋಟೆ: ಜಿಲ್ಲೆಯ ಗಂಗೂರ ಗ್ರಾಮದ ಬಡ ಯುವತಿ ಈಗ ನ್ಯಾಯಾಧೀಶೆ ಆಗಿದ್ದಾರೆ. ಭಾಗ್ಯಶ್ರೀ ಮಾದರ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿ, ಜಿಲ್ಲೆಗೆ ಬಡ ಕುಟುಂಬದ ಯುವತಿ ಭಾಗ್ಯಶ್ರೀ ಕೀರ್ತಿ ತಂದಿದ್ದಾರೆ.

2023ರಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 2024ರಲ್ಲಿ ನಡೆದ ಮೌಖಿಕ ಸಂದರ್ಶನದಲ್ಲಿ ಉತ್ತಮ ಸಾಧನೆ ಮಾಡಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ತಂದೆ ದುರಗಪ್ಪ, ತಾಯಿ ಯಮನವ್ವ ದಂಪತಿಯ ಏಳು ಜನ ಮಕ್ಕಳ ಪೈಕಿ 5ನೇ ಯವರು ಭಾಗ್ಯಶ್ರೀ. ಭಾಗ್ಯಶ್ರೀ ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರಾಗಿದ್ದು, ಕೂಲಿ ಮಾಡಿ ಮಗಳನ್ನು ಓದಿಸಿದ್ದರು.

ಇದನ್ನೂ ಓದಿ: ದಿನಭವಿಷ್ಯ: ಇಂದು ಕೇಂದ್ರ ತ್ರಿಕೋನ ರಾಜಯೋಗ, ಈ ರಾಶಿಗೆ ಎಲ್ಲದರಲ್ಲೂ ಸಕ್ಸಸ್!

2018ರಲ್ಲಿ ಕಾನೂನು ಪದವಿ ಪಡೆದ ಭಾಗ್ಯಶ್ರೀ, ಹುನಗುಂದ ಕೋರ್ಟ್ ನಲ್ಲಿ 2018-20ರವರೆಗೆ ಎರಡು ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ್ದರು. 2021-22ರ ವರೆಗೆ ಹೈಕೋರ್ಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಲಾಕ್ಲರ್ಕ್, ಕಂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದೊಂದಿಗೆ ನ್ಯಾಯಧೀಶೆ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿ, ಈಗ ನ್ಯಾಯದೀಶೆಯಾಗಿ ಆಯ್ಕೆಯಾಗಿ ಎಲ್ಲಾರಿಗೂ ಮಾದರಿಯಾಗಿದ್ದಾರೆ.

RELATED ARTICLES

Related Articles

TRENDING ARTICLES