Tuesday, May 21, 2024

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಹ ತಾರ್ಕಿಕ ಅಂತ್ಯ ಕಂಡಿಲ್ಲ : ಸತೀಶ್ ಜಾರಕಿಹೊಳಿ

ಬೆಳಗಾವಿ : ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ರಮೇಶ್ ಸಿಡಿ ಕೇಸ್ ಸಹ ತಾರ್ಕಿಕ ಅಂತ್ಯ ಕಂಡಿಲ್ಲ. ರಮೇಶ್ ಕೇಸ್ ಸಹ ಅರ್ಧಕ್ಕೆ ನಿಂತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್​ ಸಿಡಿ ಪ್ರಕರಣದಲ್ಲೂ ಮಹಾನಾಯಕನ ಹೆಸರು ಪ್ರಸ್ತಾಪ ಆಗಿತ್ತು. ಪ್ರಜ್ವಲ್ ರೇವಣ್ಣ ಕೇಸ್​ನಲ್ಲೂ ಕುಮಾರಸ್ವಾಮಿ ಪ್ರಸ್ತಾಪ ಆ ಹೆಸರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈಗಾಗಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯ, ದೇಶದ ತುಂಬಾ ಚರ್ಚೆ ಆಗ್ತಿರುವ ಸಂಗತಿ. ಈಗ ಕುಮಾರಸ್ವಾಮಿ ಆರೋಪ ಮಾಡ್ತಿದ್ದಾರೆ.  ಪ್ರಜ್ವಲ್ ರೇವಣ್ಣ ಕೇಸ್ ಎಸ್​ಐಟಿಗೆ ನೀಡಲಾಗದೆ. ತನಿಖೆಯಲ್ಲಿ ಯಾರು ಪೆನ್​ಡ್ರೈವ್ ಹಂಚಿದರು? ಯಾರು ಇದರ ಹಿಂದೆ ಇದ್ದಾರೆ ಎನ್ನುವುದು ಗೊತ್ತಾಗಲಿದೆ. ಎಸ್​ಐಟಿ ತನಿಖೆ ಆಗಿ ವರದಿ ಬರಲಿ ಎಂದು ತಿಳಿಸಿದ್ದಾರೆ.

ಈಗಾಗಲೇ ಎಸ್​ಐಟಿಗೆ ಪ್ರಕರಣ ವರ್ಗಾವಣೆ ಆಗಿದೆ. ಅದನ್ನು ಪೂರ್ಣ ತನಿಖೆ ಮಾಡಿ ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಗುವ ತನಕ ಏನು ಹೇಳಲು ಆಗಲ್ಲ. ಆರೋಪ ನಾವು ಮಾಡಬಹುದು. ಅಂತಿಮವಾಗಿ ಏಜೆನ್ಸಿ ವರದಿ ನೀಡಬೇಕು. ಅದನ್ನ ಸಾಬೀತು ಮಾಡಬೇಕಾದವರು ಏಜೆನ್ಸಿ ಹಾಗೂ ಸರ್ಕಾರ ಎಂದು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪ ಆಗಿದೆ

ಯಾರು ಮಾಡಿದ್ದಾರೆ ಎಂದು ಸಾಬೀತು ಆಗಬೇಕು. ಇಂಥವರೇ ಮಾಡಿದ್ದಾರೆ ಎಂದು ಸಾಬೀತು ಆಗಬೇಕು ಅಲ್ವಾ? ಮತ್ಯಾರಾದರೂ ಮಾಡಿರಬಹುದು. ಆದರೆ, ತನಿಖೆ ಆಗಬೇಕು. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಹೆಸರು ತೆಗೆದುಕೊಂಡಿರಬಹುದು, ಅದರ ಬಗ್ಗೆ ನನ್ನ ವಾದ ಇಲ್ಲ. ನಮ್ಮ ಡಿಸಿಎಂ ಆಗಲಿ, ಬೇರೆ ಯಾರೇ ಆಗಲಿ. ಅಥಾರಿಟಿಯಿಂದಲೇ ಕ್ಲೀಯರ್ ಆಗಬೇಕು. ಅಲ್ಲಿಯವರೆಗೆ ಅದು ಕೇವಲ ಆರೋಪವಷ್ಟೇ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES