Tuesday, May 21, 2024

ದಿನಭವಿಷ್ಯ: ಇಂದು ಕೇಂದ್ರ ತ್ರಿಕೋನ ರಾಜಯೋಗ, ಈ ರಾಶಿಗೆ ಎಲ್ಲದರಲ್ಲೂ ಸಕ್ಸಸ್!

2024 ಫೆಬ್ರವರಿ 27ರ ಮಂಗಳವಾರವಾದ ಇಂದು, ಚಂದ್ರನು ಕನ್ಯಾರಾಶಿಗೆ ಸಾಗಲಿದ್ದಾನೆ. ಹಾಗೆಯೇ ಇಂದು ಮಂಗಳ ಮತ್ತು ಗುರು ಗ್ರಹವು ಪರಸ್ಪರ ಕೇಂದ್ರ ಗೃಹದಲ್ಲಿ ಇರಲಿದ್ದು, ಇದರಿಂದ ಕೇಂದ್ರ ತ್ರಿಕೋನ ರಾಜಯೋಗ ಉಂಟಾಗುತ್ತದೆ. ಮಂಗಳ ಗುರುವಿನ ಕೇಂದ್ರ ತ್ರಿಕೋನ ರಾಜಯೋಗದೊಂದಿಗೆ ತ್ರಿಗ್ರಾಹಿ ಯೋಗ, ರುಚಕ ಯೋಗ ಮತ್ತು ಹಸ್ತಾ ನಕ್ಷತ್ರದ ಮಂಗಳಕರ ಸಂಯೋಜನೆಯು ರೂಪುಗೊಳ್ಳುತ್ತಿದೆ, ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ: ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಲಿದೆ. ಆಪ್ತರೇ ನಿಮಗೆ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಅನಗತ್ಯ ಒತ್ತಡ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಮಧುರ ಮಾತುಗಳು ಹಿತವೆನಿಸುಬಹುದು. ಕೌಟುಂಬಿಕವಾಗಿ ಶುಭ ಫಲ.

ವೃಷಭ: ದೀರ್ಘಕಾಲದ ಪ್ರಯತ್ನ ನಿಮಗೆ ಯಶಸ್ಸು ತಂದು ಕೊಡಲಿದೆ. ಈ ಹಿಂದೆ ನೀವು ಮಾಡಿದ ಸಹಾಯ ಇಂದು ಫಲ ನೀಡಲಿದೆ. ಹಿರಿಯರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರ ಅಭಿವೃದ್ಧಿ ಕಾಣಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ಮಿಥುನ: ಆಹಾರ ಹಿತ ಮಿತವಾಗಿರಲಿ, ಇಲ್ಲವಾದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿ, ಆತುರದಲ್ಲಿ ಅತಿರೇಕದ ಮಾತುಗಳನ್ನಾಡಿ ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

ಕಟಕ: ಉದ್ಯೋಗಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ಅವಶ್ಯಕ ಖರೀದಿಯ ಕಾರಣಗಳಿಂದ ಖರ್ಚು ಅಷ್ಟೇ ಹಣಕಾಸಿನ ಹರಿವು ಹೆಚ್ಚಾಗಲಿದೆ. ಕುಟುಂಬದಲ್ಲಿ ಚರ್ಚಿಸುವ ವಿಷಯಗಳು ನಿಮ್ಮನ್ನು ಭಾವುಕರನ್ನಾಗಿ ಮಾಡುವುದು. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.

ಸಿಂಹ: ಸೃಜನಾತ್ಮಕ ಕೆಲಸ ಕಾರ್ಯಗಳಿಂದ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಆರ್ಥಿಕವಾಗಿ ಸದೃಢವಾಗಿ ಇರಲಿದ್ದೀರಿ. ಅತಿಥಿಗಳ ಆಗಮನ ಸಂತಸ ತರಲಿದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶುಭ ಫಲ.

ಕನ್ಯಾ: ಹೂಡಿಕೆ ವ್ಯವಹಾರದಲ್ಲಿ ಹೆಚ್ಚು ಲಾಭ ಸಿಗಲಿದೆ. ನಿಮ್ಮ ನಡವಳಿಕೆ ಕುಟುಂಬದ ಸದಸ್ಯರಿಗೆ ಕೋಪ ತರಿಸಬಹುದು. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚು ಲಾಭ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ತುಲಾ: ಅನಿರೀಕ್ಷಿತ ಘಟನೆಗಳು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಒತ್ತಡಕ್ಕೆ ಒಳಗಾಗದೆ, ತಾಳ್ಮೆಯಿಂದ ಇರಿ. ಹಿರಿಯರ ಮಾರ್ಗದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ ಮನಸ್ಸಿಗೆ ಸಮಾಧಾನ ತರುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.

ವೃಶ್ಚಿಕ: ಪೋಷಕರ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದ್ದು, ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಕೆಲಸ ಕಾರ್ಯಗಳು ಆಲಸ್ಯದಿಂದ ಸಾಗಲಿದ್ದು, ಮುಂಜಾಗ್ರತೆ ವಹಿಸಿ. ವ್ಯಾಪಾರ ವ್ಯವಹಾರದಲ್ಲಿ ಸಾಮಾನ್ಯ. ಕೌಟುಂಬಿಕವಾಗಿ ಸಾಧಾರಣ ಫಲ.

ಧನಸ್ಸು: ಅಧಿಕ ಉತ್ಸಾಹದಿಂದ ಇರುವಿರಿ. ಆದರೂ ಕೆಲಸದ ಒತ್ತಡ ತಪ್ಪದು. ವ್ಯಾಪಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಬರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿ ಶಕ್ತಿ ಪ್ರದರ್ಶನ ಮಾಡುವಿರಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕ ಮಿಶ್ರ ಫಲ.

ಮಕರ: ಮುಂಗೋಪಿ ಮಾತುಗಳನ್ನು ಆಡಿ ತೊಂದರೆಯಿಲ್ಲಿ ಸಿಕ್ಕು, ಅಪಾಯ ತಂದುಕೊಳ್ಳುವುದು ಬೇಡ. ಭೂ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಜತೆಗೆ ಇರುವವುರೊಂದಿಗೆ ಅನಾವಶ್ಯಕ ಜಗಳಗಳು ನಡೆಯುವ ಸಾಧ್ಯತೆ ಇದೆ. ಮಾತಿನಲ್ಲಿ ನಿಗಾ ಇರಲಿ. ಉದ್ಯೋಗಿಗಳಿಗೆ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ಕುಂಭ: ಅನಾವಶ್ಯಕ ವಿಚಾರಗಳು ನಿಮ್ಮ ಮಾನಸಿಕ ನೆಮ್ಮದಿ ಹಾಳುಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸಹನೆ ಕಳೆದುಕೊಳ್ಳುವುದು ಬೇಡ. ನೆರೆಹೊರೆಯವರ ಜತೆಗೆ ವಾದಕ್ಕೆ ಇಳಿಯುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಕೌಟುಂಬಿಕ ಸಾಧಾರಣ ಫಲ.

ಮೀನ: ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ನಿಮ್ಮ ಅಭಿಪ್ರಾಯಗಳನ್ನು ಇತರರು ಒಪ್ಪಿಕೊಳ್ಳದಿರಬಹುದು. ಮನೆಯಲ್ಲಿ ಹಿರಿಯರೊಂದಿಗೆ ಮಾತಿಗೆ ಇಳಿಯುವುದು ಬೇಡ. ವ್ಯಾಪಾರ ವ್ಯವಹಾರ ಮಧ್ಯಮವಾಗಿ ಇರಲಿದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.

RELATED ARTICLES

Related Articles

TRENDING ARTICLES