Friday, May 17, 2024

ಟಿ-20 ವಿಶ್ವಕಪ್ : ಕನ್ನಡಿಗ ರಾಹುಲ್ ಹಾಗೂ ದಿನೇಶ್ ಕಾರ್ತಿಕ್​ಗೆ ಏಕಿಲ್ಲ ಸ್ಥಾನ?

ಬೆಂಗಳೂರು : ಮುಂಬರುವ ಟಿ-20 ವಿಶ್ವಕಪ್​ಗಾಗಿ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆಯ್ಕೆದಾರರು ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದಾರೆ.

ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿಲ್ಲ. ಇಶಾನ್ ಕಿಶನ್​ಗೂ ಆಯ್ಕೆದಾರರು ಮಣೆ ಹಾಕಿಲ್ಲ.

ಆಯ್ಕೆದಾರರು ಮತ್ತೊಮ್ಮೆ ಹಾರ್ದಿಕ್ ಪಾಂಡ್ಯ (ಉಪನಾಯಕ) ಮೇಲೆ ವಿಶ್ವಾಸ ಇಟ್ಟು ಆಯ್ಕೆ ಮಾಡಿದ್ದಾರೆ. ಪ್ರಕಟಗೊಂಡ ತಂಡವನ್ನು ನೋಡಿದರೆ ಆಯ್ಕೆದಾರರು ಐಪಿಎಲ್​ ಪ್ರದರ್ಶನವನ್ನು ಆಧಾರವಾಗಿ ಪರಿಗಣಿಸಿಲ್ಲ ಎಂದು ಹೇಳಬಹುದು.

ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ಮಿಂಚುತ್ತಿರುವ ಧೋನಿ ಶಿಷ್ಯ ಶಿವಂ ದುಬೆಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಇನ್ನೂ ಅಪಘಾತದ ಬಳಿಕ ಐಪಿಎಲ್​ನಲ್ಲಿ ಭರ್ಜರಿ ಕಂಬ್ಯಾಕ್ ಮಾಡಿರುವ ರಿಷಭ್ ಪಂತ್​ಗೆ ಸ್ಥಾನ ಲಭಿಸಿದೆ.

ವೇಗದ ಬೌಲರ್​ಗೆ ಏಕಿಲ್ಲ ಸ್ಥಾನ?

ಗಾಯದ ಸಮಸ್ಯೆಯ ಕಾರಣದಿಂದಾಗಿ ಮೊಹಮ್ಮದ್ ಶಮಿಗೆ ತಂಡದಲ್ಲಿ ಅವಕಾಶ ನೀಡಿಲ್ಲ. ಅನುಭವಿ ವೇಗಿ ಭುವನೇಶ್ವರ್ ಕುಮಾರ್​ ಅವರ ಪರ ಆಯ್ಕೆದಾರರು ವಿಶ್ವಾಸ ವ್ಯಕ್ತಪಡಿಸಿಲ್ಲ. ಇನ್ನೂ ಸಂದೀಪ್ ಶರ್ಮಾ, ದೀಪಕ್ ಚಹರ್, ಟಿ. ನಟರಾಜನ್ ಅವರಿಗೂ ಆಯ್ಕೆದಾರರು ಮಣೆ ಹಾಕಿಲ್ಲ. ಇನ್ನೂ ಸ್ಪಿನ್​ ಕೋಟಾದಲ್ಲಿ ಚಹಾಲ್​ ಅಚ್ಚರಿ ಎಂಬಂತೆ ಆಯ್ಕೆಯಾಗಿದ್ದಾರೆ.

ಭಾರತ ತಂಡ :

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್​ದೀಪ್ ಯಾದವ್, ಚಹಾಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಮೀಸಲು ಆಟಗಾರರು :

ಶುಭ್​ಮನ್ ಗಿಲ್, ರಿಂಕು ಸಿಂಗ್, ಖಲೀಲ್​ ಅಹ್ಮದ್​, ಅವೇಶ್ ಖಾನ್

RELATED ARTICLES

Related Articles

TRENDING ARTICLES