Thursday, May 9, 2024

ಅಯೋಧ್ಯೆ ರಾಮಮಂದಿರಕ್ಕೆ ತಲುಪಿತು ದೇಶದ ಅತೀ ದೊಡ್ಡ ಘಂಟೆ

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು,ರಾಮನಿಗಾಗಿ ದೇಶ ವಿದೇಶಗಳಿಂದ ಕೊಡುಗಳ ಮಹಾಪೂರವೇ ಹರಿದು ಬರುತ್ತಿದೆ. 

ಹೌದು, ರಾಮಮಂದಿರಕ್ಕೆ ಇದೀಗ 2,400 ಕೆ.ಜಿ ತೂಕದ ಬೃಹತ್ ಘಂಟೆ ಎಟಾಹ್ ಜಿಲ್ಲೆಯ ಜಲೇಸರ್ ಪಟ್ಟಣದಿಂದ ಅಯೋಧ್ಯೆ ತಲುಪಿದೆ. ಇದು ದೇಶದ ಅತೀ ಗೊಡ್ಡ ಘಂಟೆಯೂ ಆಗಿದೆ.

ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಈ ಬೃಹತ್ ಘಂಟೆಯನ್ನು ಪ್ರದರ್ಶಿಸಿದ ನಂತರ ರೈಲಿನ ಮೂಲಕ ಸಾಗಿಸಲಾಗಿದೆ.

ಇದನ್ನೂ ಓದಿ: ಜೈಲಿಂದ ಹೊರ ಬಂದ ತಕ್ಷಣ ಕ್ಷಮೆ ಕೇಳಿದ ಕರವೇ ನಾರಾಯಣಗೌಡ

ಸುಮಾರು 30 ಕಾರ್ಮಿಕರ ತಂಡದಿಂದ ಈ ಘಂಟೆ ತಯಾರಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳಿಂದ ತಯಾರಿಸಲಾಗಿದೆ. ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಬೇಕಾಗಿದೆ

 

 

 

 

RELATED ARTICLES

Related Articles

TRENDING ARTICLES