Thursday, May 9, 2024

ರೈತರಿಗೆ ಗುಡ್ ನ್ಯೂಸ್ : ಇಂದಿನಿಂದ 7 ತಾಸು ಪಂಪ್​ಸೆಟ್​ಗಳಿಗೆ ವಿದ್ಯುತ್ ಪೂರೈಕೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರೈತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್​ವೊಂದು ಘೋಷಣೆ ಮಾಡಿದೆ.

ರೈತರ ಪಂಪ್​ಸೆಟ್​ಗಳಿಗೆ 7 ತಾಸು ವಿದ್ಯುತ್ ಪೂರೈಸುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು ನಾನು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಬಳಿಕ ಈ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಮಳೆಯ ಅಭಾವದಿಂದ ವಿದ್ಯುತ್‌ ಉತ್ಪಾದನೆ ಕುಂಠಿತವಾದ ಹಿನ್ನೆಲೆಯಲ್ಲಿ ರೈತರಿಗೆ ಪೂರೈಕೆ ಮಾಡುವ 3 ಫೇಸ್‌ ವಿದ್ಯುತ್‌ ಅನ್ನು 5 ಗಂಟೆ ಕೊಡಲು ನಿರ್ಧಾರ ಮಾಡಿದ್ದೆವು. ಆದರೆ, ಈಗ 5 ಗಂಟೆ ವಿದ್ಯುತ್‌ ಸಾಕಾಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರತಿನಿತ್ಯ 7 ಗಂಟೆ ಕಾಲ ತ್ರಿಫೇಸ್‌ ವಿದ್ಯುತ್‌ ನೀಡಲಾಗುವುದು ಎಂದರು. .

ರಾಯಚೂರು, ಕೊಪ್ಪಳ, ಯಾದಗಿರಿ ಭಾಗದ ಜನರನ್ನ ಭೇಟಿ ಮಾಡಿ‌ 7 ಗಂಟೆ ವಿದ್ಯುತ್ ಕೊಡ್ಬೇಕು ಅಂತ ಅಧಿಕಾರಿಗಳಿಗೆ  ಈ ಹಿಂದೆ ಹೇಳಿದೆ.

ಇದನ್ನೂ ಓದಿ: 224 ಶಾಸಕರಿಗೂ ಸಿಎಂ ಆಗಬೇಕೆಂಬ ಆಸೆ ಸಹಜ : ಸಚಿವ ಕೆ.ಎಚ್.ಮುನಿಯಪ್ಪ

ಆದರೆ ಇದೀಗ ರಾಯಚೂರು, ಬಳ್ಳಾರಿ‌ನಲ್ಲಿ ಥರ್ಮಲ್ ಪವರ್ ಉತ್ಫಾದನೆ ಆಗುತ್ತೆ. ಅದು ಈಗ ಒಂದು‌ ಸಾವಿರ ಮೆಗಾ ವ್ಯಾಟ್ ಉತ್ಪತ್ತಿ ಆಗುತ್ತಿದೆ. ಮೂರು ಸಾವಿರದ ಇನ್ನೂರು ಮೆಗಾ ವ್ಯಾಟ್ ಉತ್ಪಾದನೆ ಹೆಚ್ಚು ಮಾಡಿದ್ದೇವೆ. ರಾಜ್ಯದ ವಿದ್ಯುತ್ ಬೇರೆಯವರಿಗೆ ಕೊಡಬಾರದು ಎಂದು ತಿರ್ಮಾನಿಸಿ ಇದಿನಿಂದ 7 ತಾಸು ವಿದ್ಯುತ್ ಪಂಪ್‌ ಸೆಟ್ ಗಳಿಗೆ ಕೊಡ್ತೇವೆ ಎಂದರು.

 

RELATED ARTICLES

Related Articles

TRENDING ARTICLES