Wednesday, May 1, 2024

ಜನರ ನೆಮ್ಮದಿಯ ಬದುಕು ಕಸಿದ ಹಾರೋ ಕಾರ್ಖಾನೆ ಬೂದಿ!…

ಕೊಪ್ಪಳ : ಆಯಿಲ್ ಮಿಲ್​ಗಳಿಂದ ಹಾರಿ ಬರುತ್ತಿರುವ ಬೂದಿಯಿಂದ ಜನರ ನೆಮ್ಮದಿಯ ಬದುಕನ್ನು ಕಸಿದುಕೊಂಡಿದೆ ಘಟನೆ ಕಾರಟಗಿ ತಾಲೂಕಿನ ದೇವೆಗೌಡ ಬಡಾವಣೆಯಲ್ಲಿ ನಡೆದಿದೆ.

ಕಾರಟಗಿ ತಾಲೂಕಿನ ರವಿನಗರದಲ್ಲಿರುವ ಶ್ರೀನಿವಾಸ ಲಕ್ಷ್ಮೀ, ಆಗ್ರೋ ಪ್ರೈ.ಲಿ ಮಾಲೀಕತ್ವದ ಆಯಿಲ್ ಮಿಲ್ ಕಾರ್ಖಾನೆಗಳು. ಈ ಕಾರ್ಖಾನೆಗಳು ಕಾರ್ಯಾರಂಭವಾದರೆ ಸಾಕು ಬಡಾವಣೆಗಳಲ್ಲಿ ಬೂದಿಯದ್ದೇ ಕಾರುಬಾರು. ಈ ಹಿನ್ನೆಲೆ ಕಾರ್ಖಾನೆಗಳ ಸುತ್ತಮುತ್ತ ಇರುವ ಮನೆಗಳ ಮೇಲೆಲ್ಲ ಬೂದಿ ಹಾರಿ ಬೀಳುತ್ತಿದೆ.

ಇದನ್ನು ಓದಿ : G20 ಶೃಂಗಸಭೆಯಲ್ಲಿ ಭಾರತ ಹೆಸರಿನ ನಾಮಫಲಕ ಅಳವಡಿಕೆ !

ಗಂಗಾವತಿ ಮತ್ತು ಕಾರಟಗಿ ರಾಜ್ಯ ಹೆದ್ದಾರಿ ಉದ್ದಕ್ಕೂ ಇರುವ ಕಾರ್ಖಾನೆಗಳಿಂದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಕಣ್ಣಿಗೆ ಬೂದಿ ಹಾರಿ ಬೀಳುವುದರಿಂದ, ವಾಹನ ಸವಾರರಾರು ಸಂಚರಿಸಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ.

ಈ ಘಟನೆ ಪರಿಣಾಮ ರೋಗಕ್ಕೆ ಜನರು ತುತ್ತಾಗುತ್ತಿದ್ದೇವೆ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡರು ಕ್ಯಾರೇ ಎನ್ನದ ಕಾರ್ಖಾನೆ ಮಾಲೀಕರು. ಹಾಗೂ ಜನರ ಪರಿಸ್ಥಿತಿಯನ್ನು ಗಮನಿಸದೇ ಕಣ್ಮುಚ್ಚಿ ಕುಳಿತಿರುವ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು.

RELATED ARTICLES

Related Articles

TRENDING ARTICLES