Wednesday, May 22, 2024

G20 ಶೃಂಗಸಭೆಯಲ್ಲಿ ಭಾರತ ಹೆಸರಿನ ನಾಮಫಲಕ ಅಳವಡಿಕೆ !

ನವದೆಹಲಿ: ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಿಸಬೇಕೆಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಆರಂಭವಾದ ಜಿ-20 ಶೃಂಗಸಭೆಯ ನಾಮಫಲಕದಲ್ಲೂ ಇಂಡಿಯಾ ಬದಲಿಗೆ ಭಾರತ್​ ಎಂದು ಬರೆದಿರುವುದು ಚರ್ಚೆಗೆ ಮತ್ತಷ್ಟು ಕಾರಣವಾಗಿದೆ.

ಜಿ20 ಸಭೆಯನ್ನುದ್ದೇಸಿ ಪ್ರಧಾನಿ ಮೋದಿ ಮಾತನಾಡುವ ವೇಳೆ ತಮ್ಮ ಜಾಗದ ಮುಂದೆ ಅಳವಡಿಸಿದ್ದ ನಾಮಫಲಕದಲ್ಲಿ ಇಂಡಿಯಾ ಬದಲಿಗೆ ಭಾರತ ಎಂದು ಬರೆಯಲಾಗಿದೆ. ಈ ಹಿಂದೆ ನಡೆದ ಹಲವು ಶೃಂಘಸಭೆಗಳಲ್ಲಿ  ಇಂಡಿಯಾ ಎಂದು ಬರೆಯಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಭಾರತ ಎಂಬ ಹೆಸರನ್ನು ಬರೆಯುವ ಮೂಲಕ ಮುಂಚೂಣಿಗೆ ತರಲಾಗುತ್ತಿದೆ. ಶೀಘ್ರದಲ್ಲೇ ಇಂಡಿಯಾ ಹೆಸರು ಭಾರತ ಎಂದು ಅಧಿಕೃತಗೊಳ್ಳುವ ಸಾಧ್ಯತೆಯಿದೆ.

ಜಿ-20 ದೇಶದ ನಾಯಕರುಗಳಿಗೆ ಪ್ರೆಸಿಡೆಂಟ್​ ಆಫ್​ ಇಂಡಿಯಾ ಎಂಬ ಹೆಸರಿನ ಬದಲು ಪ್ರೆಸಿಡೆಂಟ್​ ಆಫ್​ ಭಾರತ್ ಹೆಸರಿನಲ್ಲಿ ಕೆಲ ದಿನಗಳ ಹಿಂದೆ ರಾಷ್ಟ್ರಪತಿ ಭವನ ಆಹ್ವಾನ ಪತ್ರಿಕೆಯನ್ನು ಕಳುಹಿಸಿತ್ತು. ಇದರ ಬೆನ್ನಲ್ಲೇ ದೇಶದ ಹೆಸರು ಬದಲಾವಣೆಯ ಕುರಿತು ದೇಶಾದ್ಯಂತ ಭಾರಿ ಚರ್ಚೆ ಆರಂಭವಾಗಿತ್ತು.

RELATED ARTICLES

Related Articles

TRENDING ARTICLES