Wednesday, May 8, 2024

ಕೇಂದ್ರದಿಂದ ಸ್ಮಾರ್ಟ್​ ಸಿಟಿಗಳ ಪಟ್ಟಿ ಬಿಡುಗಡೆ: ರಾಜ್ಯದ ಮೂರು ಜಿಲ್ಲೆಗಳು ಆಯ್ಕೆ

ನವದೆಹಲಿ :  2022ನೇ ಸಾಲಿನ ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ವಿವಿಧ ವಲಯಗಳಲ್ಲಿ ರಾಜ್ಯದ ಮೂರು ಜಿಲ್ಲೆಗಳು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನೀಡಲಾಗುವ ಪ್ರಶಸ್ತಿ ಇದಾಗಿದ್ದು ನಾನಾ ವಲಯಗಳಲ್ಲಿ ದೇಶದ ರಾಜ್ಯಗಳಲ್ಲಿನ ಜಿಲ್ಲೆಗಳನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕರ್ನಾಟಕದ ಮೂರು ಜಿಲ್ಲೆಗಳು ವಿವಿಧ ವಲಯಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಮೋದಿ ವೀಕ್ಷಣೆಗೆ ಜನಸಾಮಾನ್ಯರಂತೆ ರಸ್ತೆಪಕ್ಕದಲ್ಲಿ ನಿಂತ ರಾಜ್ಯ ಬಿಜೆಪಿ ನಾಯಕರು!

ಪರಿಸರ ವಿಭಾಗದಲ್ಲಿ ಶಿವಮೊಗ್ಗ ಆಯ್ಕೆಯಾದರೇ ವಲಯವಾರು ಸ್ಮಾರ್ಟ್​ ಸಿಟಿಯಲ್ಲಿ ಬೆಳಗಾವಿ, ನವೀನ ಕಲ್ಪನೆ ವಿಭಾಗದಲ್ಲಿ ಹುಬ್ಬಳ್ಳಿ – ಧಾರವಾಡ  ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇನ್ನು ಅತ್ಯುತ್ತಮ ರಾಷ್ಟ್ರೀಯ ಸ್ಮಾರ್ಟ್ ಸಿಟಿಯಾಗಿ ಇಂದೋರ್ ಮೊದಲನೇ ಸ್ಥಾನಕ್ಕೆ ಆಯ್ಕೆಯಾದರೇ ಸೂರತ್ ಎರನೇ ಸ್ಥಾನ ಪಡೆದುಕೊಂಡಿದೆ, ಆಗ್ರಾ ಮೂರನೇ ಸ್ಥಾನ ಕಾಯ್ದುಕೊಂಡಿದೆ.

RELATED ARTICLES

Related Articles

TRENDING ARTICLES