Friday, April 26, 2024

ಕ್ರಿಕೆಟಿಗ ಶೋಯೆಬ್​ ಮಲಿಕ್​ ಜತೆಗೆ ಪಾಕ್​ ನಟಿಯ ಹಾಟ್​ ಫೋಟೊಶೂಟ್​​

ನವದೆಹಲಿ: ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅವರ ಪತಿ ಶೋಯೆಬ್ ಮಲಿಕ್ ಅವರ ವಿಚ್ಛೇದನದ ಕುರಿತು ನಡೆಯುತ್ತಿರುವ ಮದುವೆ ವಿಚ್ಛೇದನ ವರದಿಗಳ ನಡುವೆ ಶೋಯೆಬ್​ ಜತೆಗೆ ಪಾಕಿಸ್ತಾನಿ ಮಾಡೆಲ್ ಮತ್ತು ನಟಿ ಆಯೇಶಾ ಒಮರ್ ಅವರ ಹೆಸರು ತಳುಕು ಹಾಕಿಕೊಂಡಿದೆ.

ಸಾನಿಯಾ ಮಿರ್ಜಾ-ಶೋಯೆಬ್​ ಮಲಿಕ್​ ಇವರಿಬ್ಬರು ತಮ್ಮ 12 ವರ್ಷಗಳ ದಾಂಪತ್ಯವನ್ನ ತೊರೆಯುತ್ತಿದ್ದಾರೆ ಎಂದು ಇತ್ತೀಚಿಗೆ ವರದಿಯಾಗಿದ್ದವು. ಶೋಯೆಬ್​-ಸಾನಿಯಾ ದಂಪತಿಗೆ ಇಜಾನ್ ಮಿರ್ಜಾ ಮಲಿಕ್ ಅನ್ನು ಸಹ ಮಗ ಇದ್ದು, ದಂಪತಿಗಳು ತಮ್ಮ ವಿಚ್ಛೇದನದ ವದಂತಿಗಳ ಬಗ್ಗೆ ಮೌನವಾಗಿದ್ದಾರೆ. ಈ ಇಬ್ಬರು ದಂಪತಿಗಳು ಬೇರ್ಪಟ್ಟಿದ್ದಾರೆ ವರದಿಗಳು ಹೇಳಿದ್ದವು. ಅಲ್ಲದೆ, ಸಾನಿಯಾ ಅವರ ಇತ್ತೀಚಿಗೆ ರಹಸ್ಯ ಪೋಸ್ಟ್ ಕೂಡ ಈ ಘಟನೆಗೆ ಪುಷ್ಠಿಕರಿಸುವಂತಿದೆ.

‘ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನನ್ನು ಹುಡುಕಲು” ಎಂದು ಸಾನಿಯಾ ಮಿರ್ಜಾ ಬರೆದುಕೊಂಡಿದ್ದರು. ಜೊತೆಗೆ ಕಷ್ಟದ ದಿನಗಳಲ್ಲಿ ನನಗಾಗಿ ಇರುವ ಕ್ಷಣಗಳು ಎಂಬರ್ಥದ ಮತ್ತೊಂದು ಪೋಸ್ಟ್ ಕೂಡಾ ಮಾಡಿದ್ದರು.

ಈ ಎಲ್ಲಾ ಊಹಾಪೋಹಗಳ ಜೊತೆಗೆ, ಸಾನಿಯಾ ಮತ್ತು ಶೋಯೆಬ್ ಅವರ ಪತನದ ಹಿಂದಿನ ಪ್ರಮುಖ ಕಾರಣ ಆಯೇಶಾ ಒಮರ್ ಅವರೊಂದಿಗೆ ಶೋಯೇಬ್​ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನಿ ಕ್ರಿಕೆಟಿಗ ಆಯೇಶಾ ಜೊತೆ ಅಕ್ರಮ ಸಂಬಂಧ ಶೋಯೆಬ್​ ಹೊಂದಿದ್ದಾರೆ ಎಂದು ವರಿದಿಯಾಗಿವೆ.

RELATED ARTICLES

Related Articles

TRENDING ARTICLES