Tuesday, May 7, 2024

ಲೊಕಸಭಾ ಚುನಾವಣೆ : ಒಂದೇ ಕುಟುಂಬದ 85 ಮಂದಿ ಏಕಕಾಲದಲ್ಲಿ ಮತದಾನ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲನೇ ಹಂತದ ಚುನಾವಣೆ ಇಂದು ನಡೆಯುತ್ತಿದ್ದು ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಇದೇ ವೇಳೆ ಅಚ್ಚರಿಯೆಂಬಂತೆ ಒಂದೇ ಕುಟುಂಬದ 85 ಮಂದಿ ಏಕಕಾಲದಲ್ಲಿ ಮತದಾನ ಮಾಡಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡ ದಂಪತಿಯಿಂದ ಮತದಾನ

ಚಿಕ್ಕಬಳ್ಳಾಪುರ ನಗರದ ಮತಗಟ್ಟೆ ಸಂಖ್ಯೆ 161ರಲ್ಲಿ ವಾರ್ಡ್ ನಂಬರ್ 19ರ ನಿವಾಸಿಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ. ತಾಯಿ-ಮಗಳು-ಮೊಮ್ಮಗಳು ಸೇರಿದಂತೆ ಒಂದೇ ಕುಟುಂಬದ 85 ಮಂದಿ ಮತ ಹಾಕಿದ್ದಾರೆ. ಮತದಾನಕ್ಕಾಗಿ ಎಲ್ಲರೂ ಒಂದೆಡೆ ಸೇರಿ ಮತದಾನ ಮಾಡುವ ಸಂಪ್ರದಾಯವಿದೆ. ಅಂತೆಯೇ ಬಾದಾಮ್ ಫ್ಯಾಮಿಲಿಯಿಂದ ಒಂದೇ ಸಮಯದಲ್ಲಿ ಮತದಾನ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ 8.74% ಮತದಾನವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಡಾ.ಸುಧಾಕರ್ ಹಾಗೂ ಕಾಂಗ್ರೆಸ್‍ನಿಂದ ರಕ್ಷಾ ರಾಮಯ್ಯ ಚುನಾವಣಾ ಅಖಾಡದಲ್ಲಿದ್ದಾರೆ.

RELATED ARTICLES

Related Articles

TRENDING ARTICLES