Sunday, May 19, 2024

ಕಾಂಗ್ರೆಸ್ ರಾಮ ಹಾಗೂ ಸನಾತನ ಧರ್ಮದ ವಿರೋಧಿ : ಜೆ.ಪಿ. ನಡ್ಡಾ ವಾಗ್ದಾಳಿ

ತೆಲಂಗಾಣ : ಕಾಂಗ್ರೆಸ್​ ರಾಮ ವಿರೋಧಿ ಹಾಗೂ ಸನಾತನ ಧರ್ಮದ ವಿರೋಧಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ನಡ್ಡಾ, ಕಾಂಗ್ರೆಸ್ ದೇಶ ವಿರೋಧಿ ಪಕ್ಷಗಳೊಂದಿಗೆ ಕೈ ಜೋಡಿಸಿದೆ ಎಂದು ಟೀಕಿಸಿದ್ದಾರೆ.

ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿದ್ದಾರೆ. ಆಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮೌನವಾಗಿದ್ದರು. ಅವರು ನಮ್ಮ ಸನಾತನ ಧರ್ಮದ ಮೇಲೆ ಏಕೆ ದ್ವೇಷವನ್ನು ಹೊಂದಿದ್ದಾರೆ? ಎಂದು ಕಿಡಿಕಾರಿದ್ದಾರೆ.

ಅಧಿಕಾರಕ್ಕೆ ಬಂದ್ರೆ ಬಿಜೆಪಿ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕೆಟಲ್ ಅನ್ನು ಕಂಡು ಮಡಕೆ ಕಪ್ಪು ಎಂದಿತಂತೆ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

ಒಬಿಸಿ ಮೀಸಲಾತಿ ಮುಸ್ಲಿಮರಿಗೆ

2004ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್​​ ಅಧಿಕಾರದಲ್ಲಿದ್ದಾಗ ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗದವರ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಿತ್ತು. ಕರ್ನಾಟಕದಲ್ಲಿಯೂ ಒಬಿಸಿಗಳ ಮೀಸಲಾತಿಯನ್ನು ಮೊಟಕುಗೊಳಿಸಿ ಮುಸ್ಲಿಮರಿಗೆ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು ತೆಗೆದುಹಾಕಿತು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES